ಸಾರ್ವಜನಿಕರ ಗಮನಕ್ಕೆ :  ವನ್ಯಜೀವಿ ಅಂಗಾಂಗಗಳ ಪದಾರ್ಥ, ಟ್ರೋಫಿಗಳನ್ನು ಒಪ್ಪಿಸಲು ಅವಕಾಶ

ದಾವಣಗೆರೆ :   ಸಾರ್ವಜನಿಕರು ತಮ್ಮಲ್ಲಿರುವ ಅಘೋಷಿತ ವನ್ಯಜೀವಿ, ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಪಿಗಳು ಮತ್ತು ಸಂಸ್ಕರಿಸಿದ ಟ್ರೋಪಿಗಳನ್ನು ಅಧ್ಯರ್ಪಿಸಲು ಸಂಬಂಧಪಟ್ಟ ಅರಣ್ಯ ಇಲಾಖೆ, ಎಸಿಎಫ್, ಡಿಸಿಎಫ್ ಕಚೇರಿಗೆ ನೀಡಲು  90 ದಿನಗಳ ಕಾಲಾವಕಾಶ ನೀಡಲಾಗಿದೆ,

ಅಧ್ಯರ್ಪಿಸಲು ಏ.11 ರಂದು ಕೊನೆಯ ದಿನವಾಗಿದ್ದು, ದಾವಣಗೆರೆ ಜಿಲ್ಲೆಯ ಸಾರ್ವಜನಿಕರು ತಮ್ಮಲ್ಲಿರುವ ವನ್ಯಜೀವಿ ಅಂಗಾಗಳಾದ ಹುಲಿ ಉಗುರು, ಚಿರತೆ ಉಗುರು, ಆನೆದಂತ, ಜಿಂಕೆ ಕೊಂಬು, ವನ್ಯಪ್ರಾಣಿಗಳ ಚರ್ಮ, ವನ್ಯಜೀವಿ ವಸ್ತುಗಳು ಸೇರಿದಂತೆ ಇನ್ನಿತರೆ ವಸ್ತುಗಳನ್ನು  ಹೊಂದಿದ್ದರೆ. ಅಧ್ಯರ್ಪಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಪ್ರಾದೇಶಿಕ ವಲಯ ಕಚೇರಿ, ಮೊ. ನಂ:9481991703, ಜಗಳೂರು ಪ್ರಾದೇಶಿಕ ವಲಯ ಕಚೇರಿ, ಮೊ.9481991705, ಹೊನ್ನಾಳಿ ಪ್ರಾದೇಶಿಕ ವಲಯ ಕಚೇರಿ, ಮೊ.9481991704, ಹೊಸಕೆರೆ ರಂಗಯ್ಯನದುರ್ಗ ವನ್ಯಜೀವಿ ವಲಯ, ಮೊ. 9481991706, ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ದಾವಣಗೆರೆ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ದಾವಣಗೆರೆ ಇವರನ್ನು ಸಂಪರ್ಕಿಸಬಹುದೆಂದು ತಿಳಿಸಲಾಗಿದೆ..

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read