ʼಬಡತನʼ ದೂರವಾಗಬೇಕೆಂದರೆ ಮನೆಯ ಈ ದಿಕ್ಕಿನಲ್ಲಿ ದೀಪ ಹಚ್ಚಿ

 

ಹಿಂದೂ ಧರ್ಮದಲ್ಲಿ ದೀಪಕ್ಕೆ ಮಹತ್ವವಿದೆ. ಬಹುತೇಕರ ಮನೆಯಲ್ಲಿ ಸಂಜೆ ಸಮಯದಲ್ಲಿ ಮನೆಯಲ್ಲಿ ತುಪ್ಪದ ದೀಪ ಹಚ್ಚುತ್ತಾರೆ. ಕೆಲವರು ತುಳಸಿ ಮುಂದೆಯೂ ದೀಪ ಹಚ್ಚುತ್ತಾರೆ. ದೀಪ ಹಾಗೂ ಮನೆ ಸಮೃದ್ಧಿ ಮಧ್ಯೆ ನಂಟಿದೆ. ವಾಸ್ತು ಪ್ರಕಾರ ದೀಪ ಹಚ್ಚಿದ್ರೆ ಮನೆಯಲ್ಲಿ ಸದಾ ಸುಖ-ಶಾಂತಿ ನೆಲೆಸಿರುತ್ತದೆ.

ಬಡತನದಿಂದ ಮುಕ್ತಿ ಪಡೆಯಲು ಅನೇಕರು ಉತ್ತರ ದಿಕ್ಕಿಗೆ ಮುಖ ಹಾಕಿ ಲಕ್ಷ್ಮಿ ಪ್ರಾರ್ಥನೆ ಮಾಡ್ತಾರೆ. ಇದು ತಪ್ಪು. ಬಡತನದಿಂದ ಮುಕ್ತಿ ಬೇಕೆನ್ನುವವರು ದಕ್ಷಿಣ ದಿಕ್ಕಿನ ಮಹತ್ವದ ಬಗ್ಗೆ ತಿಳಿದುಕೊಳ್ಳಬೇಕು. ಶಾಸ್ತ್ರಗಳಲ್ಲಿ ದಕ್ಷಿಣ ದಿಕ್ಕಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಭಗವಂತ ಶ್ರೀಕೃಷ್ಣನ ಎಲ್ಲ ದೇವಸ್ಥಾನ ಎಡ ಭಾಗದಲ್ಲಿದೆ. ದೇವಿ ಲಕ್ಷ್ಮಿ ದೇವಸ್ಥಾನಗಳು ದಕ್ಷಿಣ ದಿಕ್ಕಿನಲ್ಲಿವೆ. ಉಳಿದ ಎಲ್ಲ ದಿಕ್ಕುಗಳಿಗೆ ಹೋಲಿಸಿದ್ರೆ ದಕ್ಷಿಣ ದಿಕ್ಕು ಹೆಚ್ಚು ಶುಭಕರ.

ಉತ್ತರ ದಿಕ್ಕಿನಲ್ಲಿ ಜ್ಞಾನ ಸಿಗಲಿದೆ. ಆದ್ರೆ ಶ್ರೀಮಂತಿಕೆ ಸಿಗೋದು ದಕ್ಷಿಣ ದಿಕ್ಕಿನಲ್ಲಿ. ಮನೆಯ ದಕ್ಷಿಣ ದಿಕ್ಕು ಆರ್ಥಿಕ ವೃದ್ಧಿಗೆ ಹೆಚ್ಚು ಒಳ್ಳೆಯದು. ದಕ್ಷಿಣ ದಿಕ್ಕು ತಾಯಿ ಲಕ್ಷ್ಮಿಯದ್ದು. ಇದು ಯಮನ ದಿಕ್ಕೂ ಹೌದು. ಹಾಗಾಗಿಯೇ ದೀಪಾವಳಿಯಲ್ಲಿ ಯಮ ಹಾಗೂ ಲಕ್ಷ್ಮಿ ಒಟ್ಟಿಗೆ ಬರ್ತಾರೆ. ಲಕ್ಷ್ಮಿ, ವಿಷ್ಣು ಪ್ರಿಯೆ. ಎಳ್ಳಿನ ಎಣ್ಣೆ ವಿಷ್ಣುವಿಗೆ ಪ್ರಿಯ. ಹಾಗಾಗಿ ಮನೆಯ ದಕ್ಷಿಣ ದಿಕ್ಕಿನಲ್ಲಿ ನಿಯಮಿತವಾಗಿ ಎಳ್ಳಿನ ಎಣ್ಣೆ ದೀಪವನ್ನು ಹಚ್ಚಬೇಕು. ಬಡತನ ನಿಮ್ಮ ಮನೆ ಬಿಟ್ಟು ಹೋಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read