ಸಂಯಮ ಕಳೆದುಕೊಂಡ ಸಚಿವರು ಕಾರ್ಯಕರ್ತರ ಮೇಲೆ ಕಲ್ಲು ತೂರಿದ್ದಾರೆ. ತಮಿಳುನಾಡಿಲ್ಲಿ ಡಿಎಂಕೆ ಪಕ್ಷದ ಡೈರಿ ಸಚಿವ ಎಸ್.ಎಂ. ನಾಸರ್ ಅವರು ತಿರುವಳ್ಳೂರಿನಲ್ಲಿ ಪಕ್ಷದ ಸಭೆಯೊಂದರಲ್ಲಿ ಪಕ್ಷದ ಸದಸ್ಯರ ಮೇಲೆ ಕಲ್ಲು ತೂರಾಟ ನಡೆಸುತ್ತಿರುವ ವೀಡಿಯೊ ವೈರಲ್ ಆಗಿದ್ದು ಟೀಕೆಗೆ ಗುರಿಯಾಗಿದೆ.
ರಾಜಕಾರಣಿಗಳು ಚುನಾವಣಾ ಸಮಯದಲ್ಲಿ, ಪ್ರಚಾರಕ್ಕೆ ಹೋದಾಗ ಅತ್ಯಂತ ಸಭ್ಯತೆಯಿಂದ ವರ್ತಿಸುತ್ತಾರೆ.
ಆದರೆ ಸಚಿವ ಎಸ್.ಎಂ. ನಾಸರ್ ತಮಗೆ ತಕ್ಷಣ ಕುರ್ಚಿ ತರಲಿಲ್ಲ ಎಂಬ ಕಾರಣಕ್ಕೆ ಸಿಟ್ಟಾಗಿ ಕಾರ್ಯಕರ್ತರ ಮೇಲೆ ಕಲ್ಲು ತೂರಿದ್ದಾರೆ. ಇಂಟರ್ನೆಟ್ ಬಳಕೆದಾರರು ಸಚಿವರ ನಡೆಯನ್ನು ಪ್ರಶ್ನಿಸುತ್ತಿದ್ದಾರೆ.
https://twitter.com/ANI/status/1617806257209114632?ref_src=twsrc%5Etfw%7Ctwcamp%5Etweetembed%7Ctwterm%5E1617806257209114632%7Ctwgr%5E0fe0660940d7631a2941e198fb81a00d383f5f37%7Ctwcon%5Es1_&ref_url=https%3A%2F%2Fwww.opindia.com%2F2023%2F01%2Ftamil-nadu-minister-sm-nasar-stone-dmk-worker-chair-event%2F