Shocking Video | ಟಿಎಂಸಿ ಕೌನ್ಸಿಲರ್ ಹತ್ಯೆಗೆ ಯತ್ನ; ಗನ್‌ ಕೈಕೊಟ್ಟ ಪರಿಣಾಮ ಬಚಾವ್

ಕೋಲ್ಕತಾ ರಾಜ್ಡಾಂಗ್ ಪ್ರದೇಶದ ತೃಣಮೂಲ ಕಾಂಗ್ರೆಸ್ ಕೌನ್ಸಿಲರ್ ಸುಶಾಂತ ಘೋಷ್ ಅವರ ಮೇಲೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪಾಯಿಂಟ್-ಬ್ಲಾಂಕ್ ರೇಂಜ್ನಿಂದ  ಗುಂಡು ಹಾರಿಸಲು ಪ್ರಯತ್ನಿಸಿದ್ದು, ಅವರು ಸ್ವಲ್ಪದರಲ್ಲೇ ಸಾವಿನಿಂದ ಪಾರಾಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ದಾಳಿ ಬುಧವಾರ ನಡೆದಿದ್ದು, ದಾಳಿಕೋರರು ಬಳಸಿದ 9 ಎಂಎಂ ಪಿಸ್ತೂಲ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿ ಗುಂಡು ಹಾರಿಸಲು ವಿಫಲವಾದಾಗ ಹತ್ಯಾ ಯತ್ನವನ್ನು ಜೊತೆಗಿದ್ದವರು ತಪ್ಪಿಸಿದ್ದಾರೆ.

ಕೌನ್ಸಿಲರ್ ಜೊತೆಗಿದ್ದ ವ್ಯಕ್ತಿಗಳು ಪರಾರಿಯಾಗಲು ಪ್ರಯತ್ನಿಸುತ್ತಿದ್ದ ದಾಳಿಕೋರರಲ್ಲಿ ಒಬ್ಬನನ್ನು ಹಿಡಿದಿದ್ದಾರೆ. ಬಂಧಿತ ಆರೋಪಿ ಅಪ್ರಾಪ್ತ ವಯಸ್ಕನಾಗಿದ್ದು, ಬಿಹಾರದ ವೈಶಾಲಿ ಜಿಲ್ಲೆಯವನೆಂದು ಹೇಳಲಾಗಿದೆ. ಆತನನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ದಾಳಿಯ ಸಿಸಿ ಟಿವಿ ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read