ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ಮಿಲಿಂದ್ ಗೌತಮ್ ಅಭಿನಯದ ಬಹುನಿರೀಕ್ಷಿತ “ಅನ್‌ಲಾಕ್ ರಾಘವ” ಚಿತ್ರದ ಟೈಟಲ್ ಟ್ರ್ಯಾಕ್ ಇದೇ ಜನವರಿ 7ರಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗುತ್ತಿದೆ. ಈ ಕುರಿತು ಚಿತ್ರತಂಡ ಇಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ಈ ಚಿತ್ರದಲ್ಲಿ ಮಿಲಿಂದ್ ಗೌತಮ್ ಮತ್ತು ರಾಚೆಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ಮಂಜುನಾಥ ಮತ್ತು ಗಿರೀಶ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಜೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದು, ಅಜಯ್ ಕುಮಾರ್ ಸಂಕಲನ, ವಿನೋದ್ ಮತ್ತು ಅರ್ಜುನ್ ಅವರ ಸಾಹಸ ನಿರ್ದೇಶನ, ಮುರಳಿ, ಧನಂಜಯ್ ನೃತ್ಯ ನಿರ್ದೇಶನ ಹಾಗೂ ಲವಿತ್ ಛಾಯಾಗ್ರಹಣವಿದೆ.