BREAKING NEWS: ‘ಟೈಟಾನಿಕ್’ ಖ್ಯಾತಿಯ ನಟ ಬರ್ನಾಂಡ್ ಹಿಲ್ ನಿಧನ

‘ಲಾರ್ಡ್ ಆಫ್ ದಿ ರಿಂಗ್ಸ್’ ಟ್ರೈಲಾಜಿ ಮತ್ತು ‘ಟೈಟಾನಿಕ್’ ನಲ್ಲಿನ ಶಕ್ತಿಯುತ ಅಭಿನಯಕ್ಕಾಗಿ ಹೆಸರುವಾಸಿಯಾದ ಹಿರಿಯ ಇಂಗ್ಲಿಷ್ ನಟ ಬರ್ನಾರ್ಡ್ ಹಿಲ್(79) ನಿಧನರಾಗಿದ್ದಾರೆ.

ಬಾರ್ಬರಾ ಡಿಕ್ಸನ್ ಈ ಸುದ್ದಿಯನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. “ಬರ್ನಾರ್ಡ್ ಹಿಲ್ ಅವರ ಮರಣವನ್ನು ನಾನು ಬಹಳ ದುಃಖದಿಂದ ಗಮನಿಸುತ್ತೇನೆ. ನಾವು ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ನಿಜವಾಗಿಯೂ ಅದ್ಭುತ ನಟ, RIP ಎಂದು ಬರೆದಿದ್ದಾರೆ.

ಹಿಲ್ ಅವರ ನಿಧನಕ್ಕೆ ಅಭಿಮಾನಿಗಳಿಂದ ಶ್ರದ್ಧಾಂಜಲಿಗಳ ಮಹಾಪೂರವೇ ಹರಿದು ಬಂದಿದೆ. ಅನೇಕರು ಅವರ ಬಹುಮುಖ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.

‘ದಿ ಲಾರ್ಡ್ ಆಫ್ ದಿ ರಿಂಗ್ಸ್’, ‘ಟೈಟಾನಿಕ್‌’ ಮೊದಲಾದ ಚಿತ್ರಗಳಲ್ಲಿ ಅವರು ಮರೆಯಲಾಗದ ಪಾತ್ರ ನಿರ್ವಹಿಸಿದ್ದಾರೆ. ಹಿಲ್ ಅವರದು ಐದು ದಶಕಗಳ ವೃತ್ತಿಜೀವನ. ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ಅವರು ಪಾತ್ರಗಳನ್ನು ನಿರ್ವಹಿಸಿದ್ದಾರೆ. ‘ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಟರ್ನ್ ಆಫ್ ದಿ ಕಿಂಗ್’ ಮತ್ತು ‘ಟೈಟಾನಿಕ್’ ನಂತಹ ದಾಖಲೆ ಮುರಿಯುವ ಹನ್ನೊಂದು ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದ ಎರಡು ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ಏಕೈಕ ನಟ ಅವರಾಗಿದ್ದಾರೆ.

https://twitter.com/BarbaraDickson/status/1787083243260350672

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read