ಕಲಬೆರಕೆ ವಿವಾದದ ನಡುವೆಯೂ ತಿರುಪತಿ ಬ್ರಹ್ಮ ರಥೋತ್ಸವದಲ್ಲಿ 30 ಲಕ್ಷ ಲಡ್ಡು ಮಾರಾಟ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ದೇವಸ್ಥಾನದ ಲಡ್ಡು ಪ್ರಸಾದ ಕಲಬೆರಕೆ ವಿವಾದದ ನಡುವೆಯೂ ಭಕ್ತರು 30 ಲಕ್ಷ ಖರೀದಿಸಿದ್ದಾರೆ.

ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ನಡೆದ ವಾರ್ಷಿಕ ಬ್ರಹ್ಮರಥೋತ್ಸವದಲ್ಲಿ ಈ ಬಾರಿ ಭಕ್ತರು 30 ಲಕ್ಷ ಲಡ್ಡು ಪ್ರಸಾದ ಖರೀದಿಸಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಟಿಟಿಡಿ ಮಾಹಿತಿ ನೀಡಿದೆ.

ಅ. 4 ರಿಂದ ಆರಂಭವಾದ ಬ್ರಹ್ಮರಥೋತ್ಸವ ಶನಿವಾರ ಅಂತ್ಯವಾಗಿದೆ. ಸುಮಾರು 15 ಲಕ್ಷ ಜನ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಭಕ್ತರು ಎಂಟು ದಿನಗಳ ಅವಧಿಯಲ್ಲಿ ಸುಮಾರು 30 ಲಕ್ಷ ಲಡ್ಡು ಪ್ರಸಾದ ಖರೀದಿ ಮಾಡಿದ್ದಾರೆ. ಕಳೆದ ವರ್ಷ ಬ್ರಹ್ಮರಥೋತ್ಸವದಲ್ಲಿಯೂ ಇಷ್ಟೇ ಪ್ರಮಾಣದ ಲಡ್ಡು ಮಾರಾಟವಾಗಿತ್ತು. ಈ ಬಾರಿ ಕೂಡ ಲಕ್ಷಾಂತರ ಭಕ್ತರು ಉತ್ಸವದಲ್ಲಿ ಭಾಗವಹಿಸಿ ಲಡ್ಡು ಖರೀದಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read