BREAKING: ತಿರುಪತಿಯಲ್ಲಿ ಕಾಲ್ತುಳಿತ ಪ್ರಕರಣ: ದುರಂತದ ಸ್ಥಳಕ್ಕೆ ಭೇಟಿ ನೀಡಿದ ಸಿಎಂ ಚಂದ್ರಬಾಬು ನಾಯ್ಡು: ಅಧಿಕಾರಿಗಳ ವಿರುದ್ಧ ಗರಂ

ತಿರುಪತಿ: ತಿರುಪತಿಯಲ್ಲಿ ನಡೆದಿದ್ದ ಕಾಲ್ತುಳಿತ ದುರಂತದಲ್ಲಿ 6 ಭಕ್ತರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ದುರಂತ ಘಟನೆ ಹಿನ್ನೆಲೆಯಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ತಿರುಪತಿಯ ಭೈರಾಗಿಪಟ್ಟೆಡದ ಪದ್ಮಾವತಿ ಪಾರ್ಕ್ ಬಳಿ ನಡೆದ ದುರಂತ ನಡೆದ ಸ್ಥಳಕ್ಕೆ ಸಿಎಂ ಚಂದ್ರಬಾಬು ನಾಯ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಘಟನೆ ಹೇಗೆ ನಡೆಯಿತು? ಯಾಕೆ ಹೀಗೆ ಆಗಿದೆ? ಎಲ್ಲಿ ಲೋಪವಾಗಿದೆ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.ಭದ್ರತೆ ವಿಚಾರದಲ್ಲಿ ಮತ್ತಷ್ಟು ನಿಗಾ ವಹಿಸಬೇಕು. 2000 ಜನರು ಮಾತ್ರ ಒಳಗೆ ಹೋಗಲು ಅವಕಾಶವಿರುವಾಗ 2500 ಜನರನ್ನು ಒಳಗೆ ಬಿಟ್ಟಿದ್ದು ಯಾಕೆ? ಎಂದು ಸಿಎಂ ಗರಂ ಆಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read