ತಿರುಪತಿ ಲಡ್ಡು ವಿವಾದ: ಇದು ವಿದೇಶಿ ಕ್ರಿಶ್ಚಿಯನ್ ಮಷಿನರಿಗಳ ಕೆಲಸ; ಜಗನ್ ಮೋಹನ್ ರೆಡ್ಡಿಯನ್ನು ಬಂಧಿಸಲಿ: ಈಶ್ವರಪ್ಪ ಆಗ್ರಹ

ವಿಜಯಪುರ: ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಜಗನ್ ಮೋಹನ್ ರೆಡ್ಡಿ ಸಿಎಂ ಆದ ಸಂದರ್ಭದಲ್ಲಿ ಇಡಿ ಪ್ರಪಂಚಕ್ಕೆ ಮಾಡಿದ್ದು ಮೋಸ. ಮೊದಲು ಜಗನ್ ಅವರನ್ನು ಬಂಧಿಸಬೇಕು ಎಂದು ಹೇಳಿದರು.

ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿದೆ. ಇದು ವಿದೇಶಿ ಕ್ರಿಶ್ಚಿಯನ್ ಮಷಿನರಿಗಳ ಕೆಲಸ. ಹಿಂದೂಗಳ ಶ್ರದ್ಧೆಗೆ ಭಂಗ ತರುವ ಕೆಲಸ ಮಾಡಿದ್ದಾರೆ. ನಮ್ಮ ಶ್ರದ್ಧೆ ಹಾಗೂ ಶ್ರದ್ಧಾ ಕೇಂದ್ರಕ್ಕೆ ಅವಮಾನ ಮಾಡಿದ್ದಾರೆ. ಇದರಲ್ಲಿ ವಿದೇಶಿ ಸಂಚು ಅಡಗಿದೆ ಎಂದು ಕಿಡಿಕಾರಿದ್ದಾರೆ.

ಇದನ್ನು ಯಾರೂ ಸಹಿಸಲ್ಲ. ಎಲ್ಲಾ ಪಕ್ಷದ ನಾಯಕರು ಈ ಕೃತ್ಯವನ್ನು ಖಂಡಿಸಿದ್ದಾರೆ. ತಪ್ಪು ಮಾದಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read