ಬಟ್ಟೆಗಳನ್ನ ಪ್ರತಿ ಸಲ ಐರನ್ ಮಾಡೋದು ಬೇಜಾರಾ ? ಹಾಗಾದ್ರೆ ಇಂತಹ ಬಟ್ಟೆಗಳನ್ನೇ ಆಯ್ಕೆ ಮಾಡಿ

ಬಟ್ಟೆ ಇಸ್ತ್ರಿ ಮಾಡಲು ಸೋಮಾರಿತನನಾ? ಈ ಟಿಪ್ಸ್​ ಫಾಲೋ ಮಾಡಿ ಬೇಗ ಐರನ್ ಆಗುತ್ತೆ! | 6 amazing tips to iron clothes in less time and effort how to press dress easily to look good in

ಸುಕ್ಕು ಸುಕ್ಕಾದ ಬಟ್ಟೆಗಳು ಧರಿಸಿದರೆ ಮುಜುಗರವೇ ಹೆಚ್ಚು. ಬಟ್ಟೆಗಳಿಂದಲೇ ಘನತೆಯನ್ನು ಅಳೆಯುವ ಸಮಾಜದಲ್ಲಿ ಸುಕ್ಕು ಬಟ್ಟೆಗಳು ಕೀಳರಿಮೆಯನ್ನು ಹೆಚ್ಚಿಸಬಹುದು.

ಐರನ್ ಮಾಡದೇ ಬಟ್ಟೆಗಳನ್ನು ಧರಿಸಿದರೆ ಎಷ್ಟೇ ಹೊಸತಾದರೂ ಹಳೆಯದಂತೆ ಕಾಣುತ್ತದೆ. ಹಳೆಯ ಬಟ್ಟೆಯನ್ನು ನೀಟಾಗಿ ಐರನ್ ಮಾಡಿದರೆ ಅದರ ಲುಕ್ ಬದಲಾಗಿಬಿಡತ್ತೆ.

ಪ್ರತಿ ನಿತ್ಯ ಕೆಲಸಕ್ಕೆ ಹೋಗುವವರಿಗೆ ಬಟ್ಟೆಗಳನ್ನು ಐರನ್ ಮಾಡುವುದೇ ಒಂದು ದೊಡ್ಡ ಕೆಲಸ. ಐರನ್ ಆಗದ ಬಟ್ಟೆ ಧರಿಸಲು ಮುಜುಗರ ಆಗಬಹುದು. ಹಾಗಂತ ಗಂಟೆ ಗಟ್ಟಲೆ ಬಟ್ಟೆಗಳನ್ನು ಐರನ್ ಮಾಡುತ್ತಾ ಕೂರಲು ಬೇಸರ ಎನಿಸುವವರಿಗೆ ಇಲ್ಲೊಂದು ಒಳ್ಳೆಯ ಟಿಪ್ಸ್.

ನೀವು ಬಟ್ಟೆ ಖರೀದಿ ಮಾಡುವಾಗ ಪದೇ ಪದೇ ಐರನ್ ಮಾಡುವ ಅಗತ್ಯ ಇರದ ಬಟ್ಟೆಗಳನ್ನೇ ಆಯ್ಕೆ ಮಾಡಿಕೊಂಡರೆ ಹೆಚ್ಚು ಜಾಣತನ ಇದೆ.

ಕೆಲವು ಬಟ್ಟೆಗಳು ಒಗೆದು ಒಣಗಿಸಿದರೆ ಸಾಕು, ಸದಾ ಐರನ್ ಬೇಡುವುದಿಲ್ಲ. ಆಗೊಮ್ಮೆ ಈಗೊಮ್ಮೆ ಇಂತಹ ಬಟ್ಟೆಗಳಿಗೆ ಬಿಸಿ ಮುಟ್ಟಿಸಿದರೆ ಆಯಿತು.

ಅಂತಹ ಕೆಲವು ಬಟ್ಟೆಗಳೆಂದರೆ ಪಾಲಿಸ್ಟರ್, ನೈಲಾನ್, ಸ್ಯಾಟಿನ್, ಸ್ಪಾಂಡೆಕ್ಸ್ ಮತ್ತು ಆಕ್ರಿಲಿಕ್ ಫ್ಯಾಬ್ರಿಕ್ ಗಳು ಸದಾ ಐರನ್ ಮಾಡುವ ಅವಶ್ಯಕತೆ ಇರುವುದಿಲ್ಲ. ಜೊತೆಗೆ ಈ ಬಟ್ಟೆಗಳು ಐರನ್ ಇಲ್ಲದೆ ಹೋದರೂ ಹೊಳಪು ಮಾಸುವುದಿಲ್ಲ. ಮುಂದಿನ ಸಲ ಹೊಸ ಬಟ್ಟೆಗಳನ್ನು ಖರೀದಿಸುವಾಗ ಈ ವಿಷಯವನ್ನು ತಪ್ಪದೇ ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read