ಕದ್ದ ವಸ್ತುಗಳನ್ನು ವಿಡಿಯೋದಲ್ಲಿ ಪ್ರದರ್ಶಿಸಿ ಬಂಧನಕ್ಕೊಳಗಾದ ಯುವತಿ | Watch

ಫ್ಲೋರಿಡಾ ಮೂಲದ ಟಿಕ್‌ಟಾಕ್ ಪ್ರಭಾವಿಯೊಬ್ಬಳು ತಾನು ಕದ್ದ ವಸ್ತುಗಳನ್ನು ಪ್ರದರ್ಶಿಸುತ್ತಿರುವುದನ್ನು ನೋಡಿದ ನಂತರ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಆಕೆ ಅಂಗಡಿಯೊಂದರಲ್ಲಿ ತಾನು ಕಳ್ಳತನ ಮಾಡಿರುವುದನ್ನು ಪರೋಕ್ಷವಾಗಿ ಹೇಳಿಕೊಂಡಿದ್ದಳು. ಕೇಪ್ ಕೋರಲ್‌ನಲ್ಲಿರುವ ಟಾರ್ಗೆಟ್ ಸ್ಟೋರ್‌ನಿಂದ $500 ಕ್ಕಿಂತ ಹೆಚ್ಚು ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಈಗ ಆಕೆಯನ್ನು ಬಂಧಿಸಲಾಗಿದೆ.

ಅಕ್ಟೋಬರ್ 30 ರಂದು ನಡೆದ ಘಟನೆ ಭದ್ರತಾ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಬಂಧನಕ್ಕೊಳಗಾದ ಯುವತಿಯನ್ನು 22 ವರ್ಷದ ಮರ್ಲೆನಾ ವೆಲೆಜ್ ಎಂದು ಗುರುತಿಸಲಾಗಿದ್ದು, $500 ಕ್ಕಿಂತ ಹೆಚ್ಚು ಮೌಲ್ಯದ 16 ವಸ್ತುಗಳನ್ನು ಕದ್ದಿದ್ದಾರೆ.

ವೆಲೆಜ್ ತನ್ನ 300,000 ಅನುಯಾಯಿಗಳಿಗಾಗಿ ಟಿಕ್‌ಟಾಕ್‌ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಕೇಪ್ ಕೋರಲ್ ಪೊಲೀಸ್ ಇಲಾಖೆಯು, ವಸ್ತುಗಳನ್ನು ಸ್ಕ್ಯಾನ್ ಮಾಡಲು ಸ್ವಯಂ-ಚೆಕ್‌ಔಟ್‌ನಲ್ಲಿ ನಕಲಿ ಬಾರ್‌ಕೋಡ್ ಬಳಸುವ ಕುರಿತಂತೆ ಈಗ ಎಚ್ಚರಿಕೆ ನೀಡಿದೆ.

ಅಂಗಡಿಯ ಭದ್ರತಾ ಕ್ಯಾಮೆರಾವನ್ನು ಪರಿಶೀಲಿಸಿದ ನಂತರ, ಪೊಲೀಸರು ಶಂಕಿತಳ ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಬಳಿಕ ಅನಾಮಧೇಯ ಕರೆ ಮಾಡಿದ ವ್ಯಕ್ತಿಯೊಬ್ಬರು ಶಂಕಿತ ವ್ಯಕ್ತಿಯ ಗುರುತಿನ ಬಗ್ಗೆ ಪೊಲೀಸರಿಗೆ ಸುಳಿವು ನೀಡಿದ್ದರು. ಕರೆ ಮಾಡಿದವರು ವೆಲೆಜ್ ಅವರ ಅನುಯಾಯಿಗಳಲ್ಲಿ ಒಬ್ಬರು ಎಂದು ಊಹಿಸಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read