ಪ್ರಾಣಿಗಳು ಹೊಟ್ಟೆ ತುಂಬಿದರೆ ಯಾರ ತಂಟೆಗೂ ಬರುವುದಿಲ್ಲ. ಅಂಥ ಕೆಟ್ಟ ಗುಣ ಇರುವುದು ಮನುಷ್ಯರಿಗೆ ಮಾತ್ರ, ಎಷ್ಟೇ ಶ್ರೀಮಂತನಾದರೂ, ಹೊಟ್ಟೆ ತುಂಬಿದ್ದರೂ ಇನ್ನಷ್ಟು ಮತ್ತಷ್ಟು ಹಪಾಹಪಿ ಮಾಡುವ ಕ್ರೂರ ಪ್ರಾಣಿಯೆಂದರೆ ಮನುಷ್ಯರು ಮಾತ್ರ ಎನ್ನುತ್ತಾರೆ. ಪ್ರಾಣಿ ಪ್ರಪಂಚದ ಈ ಮಾತನ್ನು ನಿಜ ಮಾಡುವ ವಿಡಿಯೋ ಒಂದು ವೈರಲ್ ಆಗಿದೆ.
ಐಎಫ್‌ಎಸ್ ಅಧಿಕಾರಿ ರಮೇಶ್ ಪಾಂಡೆ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಕಾಡಿನ ಚಿತ್ರಣ ಇದಾಗಿದ್ದು, ಇದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದರಲ್ಲಿ ಹುಲಿ ಕುಳಿತಿರುವುದನ್ನು ನೋಡಬಹುದು. ಅದರ ಮುಂದೆಯೇ ಜಿಂಕೆಯೊಂದು ನಿಂತಿರುವುದನ್ನು ನೋಡಬಹುದು. ವೀಡಿಯೋ ಮುಂದುವರೆದಂತೆ, ಹುಲಿ ಜಿಂಕೆಯನ್ನು ದುರುಗುಟ್ಟು ನೋಡುತ್ತಿರುತ್ತದೆ. ಆದರೆ ಅಚ್ಚರಿ ಎಂದರೆ ಜಿಂಕೆ ಕದಲದೇ ನಿಂತಿರುತ್ತದೆ.
ನಂತರ ಹುಲಿ ಎದ್ದು ಜಿಂಕೆಯ ಹತ್ತಿರ ಹೋಗುತ್ತಿದ್ದಂತೆಯೇ ಇನ್ನೇನು ಅದು ಜಿಂಕೆಯನ್ನು ಹಿಡಿದೇ ಬಿಡುತ್ತದೆ ಎಂದುಕೊಳ್ಳಬೇಕು. ಆದರೆ ಹುಲಿ ಸುಮ್ಮನೆ ಅತ್ತ ಸಾಗುವುದನ್ನು ವಿಡಿಯೋದಲ್ಲಿ ನೋಡಬಹುದು.
https://twitter.com/rameshpandeyifs/status/1630789497029005312?ref_src=twsrc%5Etfw%7Ctwcamp%5Etweetembed%7Ctwterm%5E1630789497029005312%7Ctwgr%5E3e86cbc6b0b832f204f75b1531b624038450b3be%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ftiger-walks-past-deer-without-attacking-it-ifs-officer-shares-viral-video-2341188-2023-03-01
https://twitter.com/rameshpandeyifs/status/1631148741163122689