ಟೆಕ್ಸಾಸ್: ಜನರು ತಮ್ಮ ಸಾಕುಪ್ರಾಣಿಗಳನ್ನು, ಸಾಮಾನ್ಯವಾಗಿ ನಾಯಿಗಳನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗುವುದು ಸಾಮಾನ್ಯವಾಗಿದೆ. ಸಾಕುಪ್ರಾಣಿಗಳನ್ನು ನಡೆಸುವುದು ಪ್ರಾಣಿಗಳಿಗೆ ಆರೋಗ್ಯಕರವಾಗಿರುತ್ತದೆ ಮತ್ತು ಮಾಲೀಕರಿಗೆ ಸ್ವಲ್ಪ ದೈಹಿಕ ಚಟುವಟಿಕೆಯನ್ನು ಪಡೆಯಲು ಸಹಾಯ ಮಾಡುತ್ತದೆ.
ಸಾಕುಪ್ರಾಣಿಗಳು ತಾವಾಗಿಯೇ ಮನೆಯಿಂದ ಹೊರಬರುವ ನಿದರ್ಶನಗಳಿವೆ ಮತ್ತು ಅವುಗಳನ್ನು ಕಂಡಾಗ, ಸಂಬಂಧಪಟ್ಟ ನೆರೆಹೊರೆಯವರು ಮಾಲೀಕರಿಗೆ ತಿಳಿಸುತ್ತಾರೆ. ಆದರೆ ನಾಯಿ ಬದಲು ಹುಲಿ ರಸ್ತೆ ಮೇಲೆ ಬಂದರೆ? ಇದನ್ನು ಕೇಳಿದರೇನೆ ಹೃದಯಸ್ತಂಭನವಾಗುತ್ತದೆ ಅಲ್ಲವೆ? ಇಲ್ಲೊಂದು ವೈರಲ್ ವಿಡಿಯೋದಲ್ಲಿ ಹುಲಿ ರಸ್ತೆ ಮೇಲೆ ನಡೆದಾಡುತ್ತಿರುವುದನ್ನು ನೋಡಬಹುದು,
ಅಮೆರಿಕದ ಹೂಸ್ಟನ್, ಟೆಕ್ಸಾಸ್ನಲ್ಲಿ ಯಾರೋ ಒಬ್ಬರು ಅಕ್ರಮವಾಗಿ ಸಾಕಿರುವ ಹುಲಿ ಇದು ಎನ್ನಲಾಗಿದೆ. ಇದು ಹೊರಕ್ಕೆ ಬರುತ್ತಿದ್ದಂತೆಯೇ ವ್ಯಕ್ತಿಯೊಬ್ಬ ಬಂದೂಕು ಹಿಡಿದು ನಿಂತಿರುವುದನ್ನು ನೋಡಬಹುದು. ಹುಲಿ ಆತನ ಬಳಿ ಬಂದು ಅಲ್ಲಿಗೆ ನಿಂತಿದೆ. ವಿಡಿಯೋ ಅಲ್ಲಿಗೆ ಮುಗಿಯುತ್ತದೆ. ನಂತರ ಹುಲಿಯನ್ನು ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ ಎನ್ನಲಾಗಿದೆ.
https://twitter.com/naturerareside/status/1617532696481370113?ref_src=twsrc%5Etfw%7Ctwcamp%5Etweetembed%7Ctwterm%5E1617532696481370113%7Ctwgr%5Ed8b58b6dc961a75cec4f5a12663f46a8f1f67456%7Ctwcon%5Es1_&ref_url=https%3A%2F%2Fwww.india.com%2Fviral%2Ftiger-sher-baagh-walk-residential-area-man-with-handgun-stop-viral-video-5886460%2F