BIG NEWS: ಹುಲಿ ಉಗುರು ಪ್ರಕರಣ: ಮತ್ತೊಂದು ದಾಳಿಗೆ ಸಜ್ಜಾದ ಅರಣ್ಯಾಧಿಕಾರಿಗಳು

ಬೆಂಗಳೂರು: ಹುಲಿ ಉಗುರು ಧರಿಸಿದ್ದ ಕಾರಣಕ್ಕೆ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬೆನ್ನಲ್ಲೇ ಹುಲಿ ಉಗುರು ಇಟ್ಟುಕೊಂಡಿರುವ ಸೆಲೆಬ್ರಿಟಿಗಳು, ವಿವಿಧ ಗುರೂಜಿಗಳು, ನಿರ್ಮಾಪಕರು ಸೇರಿದಂತೆ ಹಲವರಿಗೆ ಸಂಕಷ್ಟ ಎದುರಾಗಿದೆ.

ನಿನ್ನೆ ನಟ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ಧನಂಜಯ ಗುರೂಜಿ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವರ ಮನೆ ಹಾಗೂ ಕಚೇರಿಗಳ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ, ಹುಲಿ ಉಗುರು ಪೆಂಡೆಂಟ್ ವಶಕ್ಕೆ ಪಡೆದಿದ್ದರು.

ಇದರ ಬೆನ್ನಲ್ಲೇ ಈಗ ಮತ್ತೊಂದು ಬೆಳವಣಿಗೆ ನಡೆದಿದ್ದು, ಅರಣ್ಯಾಧಿಕಾರಿಗಳ ತಂಡ ಮತ್ತೊಂದು ದಾಳಿ ನಡೆಸಲು ಪ್ಲಾನ್ ಮಾಡಿದೆ.

ಹುಲಿ ಉಗುರಿಗೆ ಪೆಂಡೆಂಟ್ ಮಾಡಿಕೊಡುವ ಆಭರಣ ಅಂಗಡಿಗಳ ಮಾಲೀಕರಿಗೂ ಸಂಕಷ್ಟ ಎದುರಾಗಿದೆ. ಚಿನ್ನದ ಅಂಗಡಿ ಮಾಲೀಕರು, ಗ್ರಾಹಕರ ಆರ್ಡರ್ ಪಡೆದು ವಿವಿಧ ಮಾದರಿಯಲ್ಲಿ ಪೆಂಡೆಂಟ್ ಮಾಡಿಕೊಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಹುಲಿ ಉಗುರುಗಳನ್ನು ಚಿನ್ನದ ವ್ಯಾಪಾರಿಗಳು ಎಲ್ಲಿಂದ ತರುತ್ತಾರೆ? ವ್ಯಾಪಾರಿಗಳಿಗೆ ಹುಲಿ ಉಗುರು ಕೊಡುವವರು ಯಾರು? ಎಂಬ ಮಾಹಿತಿ ಕಲೆ ಹಾಕಲು ಆಭರಣ ಮಳಿಗೆ, ಚಿನ್ನದಂಗಡಿ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read