ಬಿಸಿ ಬಿಸಿ ದೋಸೆಯಂತೆ ಟಿಕೆಟ್ ಮಾರಾಟ: ‘ಬುಕ್ ಮೈ ಶೋ’ ಸರ್ವರ್ ಡೌನ್ !

ಮಲಯಾಳಂನ ಅತಿದೊಡ್ಡ ಬಜೆಟ್ ಚಿತ್ರ ‘ಎಂಪ್ರಾನ್’ ಮಾರ್ಚ್ 27 ರಂದು ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದೆ. ಶುಕ್ರವಾರ ಬೆಳಗ್ಗೆ 9 ಗಂಟೆಗೆ ಬುಕಿಂಗ್ ಆರಂಭವಾಯಿತು. ವರದಿಗಳ ಪ್ರಕಾರ, ಟಿಕೆಟ್‌ಗಳು ಬಿಸಿ ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ಕೇರಳದ ಹೆಚ್ಚಿನ ಚಿತ್ರಮಂದಿರಗಳು ಮೊದಲ ದಿನದ ಟಿಕೆಟ್‌ಗಳನ್ನು ಈಗಾಗಲೇ ಮಾರಾಟ ಮಾಡಿವೆ. ಒಂದು ಹಂತದಲ್ಲಿ, ‘ಬುಕ್ ಮೈ ಶೋ’ ಅಪ್ಲಿಕೇಶನ್ ಕೂಡಾ ಭಾರಿ ಆನ್‌ಲೈನ್ ಟ್ರಾಫಿಕ್‌ನಿಂದಾಗಿ ಸ್ಥಗಿತಗೊಂಡಿತ್ತು.

ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿದರೆ, ಅನೇಕ ಜನರು ನಿರಾಶೆಗೊಳ್ಳುವ ಸಾಧ್ಯತೆಯಿದೆ ಮತ್ತು ಮೊದಲ ದಿನ ಚಿತ್ರವನ್ನು ನೋಡುವ ಅವರ ಸುದೀರ್ಘ ಕಾಯುವಿಕೆ ಫಲಪ್ರದವಾಗುವ ಸಾಧ್ಯತೆ ಕಡಿಮೆ. ವರದಿಗಳ ಪ್ರಕಾರ, ಚಿತ್ರವು ಮೊದಲ ದಿನವೇ 50 ಕೋಟಿ ರೂಪಾಯಿ ಗಳಿಸಲಿದೆ. ಎಂಪ್ರಾನ್ 2019 ರಲ್ಲಿ ಬಿಡುಗಡೆಯಾದ ಬ್ಲಾಕ್‌ಬಸ್ಟರ್ ಚಿತ್ರ ಲೂಸಿಫರ್‌ನ ಮುಂದುವರಿದ ಭಾಗವಾಗಿದೆ. ಈ ಚಿತ್ರವು ಮಲಯಾಳಂ, ಹಿಂದಿ, ತಮಿಳು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಮೋಹನ್‌ಲಾಲ್ ನಟಿಸಿರುವ ಈ ಚಿತ್ರವನ್ನು ಆಂಟೋನಿ ಪೆರುಂಬಾವೂರ್ ಮತ್ತು ಗೋಕುಲಂ ಗೋಪಾಲನ್ ‘ಆಶೀರ್ವಾದ್ ಸಿನಿಮಾಸ್’ ಮತ್ತು ‘ಗೋಕುಲಂ ಮೂವೀಸ್’ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಿಸಲಿದ್ದಾರೆ. ಮುರಳಿ ಗೋಪಿ ಕಥೆ ಬರೆದಿದ್ದಾರೆ ಮತ್ತು ಸುಜಿತ್ ವಾಸುದೇವ್ ಛಾಯಾಗ್ರಹಣ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read