ಬೆಳಗಾವಿ ಜಿಲ್ಲೆಯ ಒಂದೇ ಕುಟುಂಬದ ಮೂವರು ಜಲ ಸಮಾಧಿಯಾಗಿದ್ದಾರೆ. ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆಯ ಶಿರೋಡಾ ಸಮುದ್ರದಲ್ಲಿ ದುರಂತ ಸಂಭವಿಸಿದೆ.
ದಸರಾ ರಜೆ ಹಿನ್ನೆಲೆ ಎಂಟು ಜನರು ಪ್ರವಾಸಕ್ಕೆ ಹೋಗಿದ್ದಾಗ ಸಮುದ್ರ ಪಾಲಾಗಿದ್ದಾರೆ. ಈಗಾಗಲೇ ಮೂವರು ಶವವಾಗಿ ಪತ್ತೆಯಾಗಿದ್ದು, ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ.
ಸಮುದ್ರದಲ್ಲಿ ಮುಳುಗಿ ಮೂವರು ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಶಿರೋಡಾ ಎಂಬಲ್ಲಿ ಘಟನೆ ನಡೆದಿದೆ. ಸಮುದ್ರಕ್ಕೆ ಈಜಲು ಇಳಿದಾಗ ಎಂಟು ಜನ ನಾಪತ್ತೆಯಾಗಿದ್ದಾರೆ. ಬೆಳಗಾವಿಯಿಂದ ಪ್ರವಾಸಕ್ಕೆ ತೆರಳಿದ್ದ ಎಂಟು ಮಂದಿ ಸಮುದ್ರದಲ್ಲಿ ಈಜುವಾಗ ನಾಪತ್ತೆಯಾಗಿದ್ದು, ಮೂವರ ಶವಗಳು ಪತ್ತೆಯಾಗಿದೆ.
ಮೃತರು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಲೋಂಡಾ ಗ್ರಾಮದ ನಿವಾಸಿಗಳಾಗಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ನಾಪತ್ತೆಯಾಗಿರುವ ಉಳಿದ ನಾಲ್ವರಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.