ಬರ್ಲಿನ್: ದಕ್ಷಿಣ ಜರ್ಮನಿಯಲ್ಲಿ ಪ್ರಯಾಣಿಕ ರೈಲು ಹಳಿತಪ್ಪಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮ್ಯೂನಿಚ್‌ನಿಂದ ಪಶ್ಚಿಮಕ್ಕೆ ಸುಮಾರು 158 ಕಿಲೋಮೀಟರ್ ದೂರದಲ್ಲಿರುವ ರೀಡ್ಲಿಂಗೆನ್ ಬಳಿ ಅಪಘಾತ ನಡೆದಿದೆ. ತನಿಖೆ ನಡೆಸಲಾಗಿದೆ ಎಂದು ಫೆಡರಲ್ ಮತ್ತು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರು ದುರಂತದ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ ಮತ್ತು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಕನಿಷ್ಠ ಎರಡು ಬೋಗಿಗಳು ಹಳಿತಪ್ಪಿದಾಗ ರೈಲಿನಲ್ಲಿ ಸುಮಾರು 100 ಜನ ಇದ್ದರು. ಅಪಘಾತದ ಮೊದಲು ಆ ಪ್ರದೇಶದಲ್ಲಿ ಭಾರೀ ಬಿರುಗಾಳಿ ಹಾದುಹೋಗಿದೆ. ಜರ್ಮನಿಯ ಪ್ರಮುಖ ರಾಷ್ಟ್ರೀಯ ರೈಲ್ವೆ ನಿರ್ವಾಹಕ ಡಾಯ್ಚ ಬಾನ್ ಪರಿಶೀಲಿಸಿದ್ದು, ತನಿಖಾಧಿಕಾರಿಗಳೊಂದಿಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.