ಕಾರವಾರ: ಹಿಂಸಾತ್ಮಕವಾಗಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಭಟ್ಕಳ ಗ್ರಾಮೀಣ ಠಾಣೆ ಪೋಲೀಸರು ಕಾರ್ಯಾಚರಣೆ ನಡೆಸಿ ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಲಾರಿಯಲ್ಲಿ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದ ಗೋಗುಗಳನ್ನು ಶಿರಾಲಿ ಚೆಕ್ ಪೋಸ್ಟ್ ಬಳಿ ಲಾರಿ ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ.
ಗದಗ ನಿವಾಸಿಗಳಾದ ಚೇತನ್(26), ಸಂತೋಷ್(25) ದುರ್ಗಪ್ಪ(50) ಅವರನ್ನು ವಶಕ್ಕೆ ಪಡೆಯಲಾಗಿದೆ. ವಧೆ ಮಾಡುವ ಉದ್ದೇಶದಿಂದ ಗೂಳಿಗಳು ಸೇರಿದಂತೆ ಗೋವುಗಳಿಗೆ ನೀರು ಹುಲ್ಲು ಕೊಡದೆ ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿತ್ತು.
ಅವುಗಳನ್ನು ವಶಕ್ಕೆ ಪಡೆದ ಭಟ್ಕಳ ಗ್ರಾಮೀಣ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸಬ್ ಇನ್ಸ್ಪೆಕ್ಟರ್ ಭರ್ಮಪ್ಪ ಬೆಳಗಲಿ ದೂರು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಅಣ್ಣಪ್ಪ ನಾಯಕ್, ರಾಮಯ್ಯ ನಾಯ್ಕ್, ಬಸವನಗೌಡ ಪಾಟೀಲ್, ಚಾಲಕ ದೇವರಾಜ್ ಮೊಗೇರ ಭಾಗವಹಿಸಿದ್ದರು.