ಬೆಂಗಳೂರು : ರಸ್ತೆಯಲ್ಲಿ ಪಟಾಕಿ ಕಿಡಿ ತಾಗಿದ್ದಕ್ಕೆ ಜನರತ್ತ ಮಚ್ಚು ಬೀಸಿದ ಮೂವರು ಪುಂಡರನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಂಧಿತರನ್ನು ಸರ್ವಜ್ಞನಗರದ ನಿವಾಸಿಗಳಾದ ಅಮೀನ್ ಷರೀಫ್, ಸೈಯದ್ ಅರ್ಬಾಜ್, ಸೈಯದ್ ಖಾದರ್ ಎಂದು ಗುರುತಿಸಲಾಗಿದೆ. ರಸ್ತೆಯಲ್ಲಿ ಪಟಾಕಿ ಹೊಡೆಯುವ ವಿಷಯಕ್ಕೆ ಗಲಾಟೆ ನಡೆದಿದೆ. ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೈಕ್ ನಲ್ಲಿ ಖಾದರ್ ಹೋಗುವಾಗ ಮನೆ ಮುಂದೆ ಹೊಡೆಯುತ್ತಿದ್ದ ಪಟಾಕಿ ಕಿಡಿ ಆತನಿಗೆ ತಗುಲಿದೆ. ಆತ ಇದಕ್ಕೆ ಗಲಾಟೆ ಮಾಡಿದ್ದಾಗ ಸ್ಥಳೀಯರು ಆಕ್ಷೇಪಿಸಿದ್ದಾರೆ. ವಾಪಸ್ ಹೋದ ಖಾದರ್ ನಂತರ ಸ್ನೇಹಿತರನ್ನು ಕರೆದುಕೊಂಡು ಮಚ್ಚು ಬೀಸಿದ್ದಾನೆ . ಪರಿಣಾಮ ವ್ಯಕ್ತಿಯೊಬ್ಬರಿಗೆ ಗಾಯಗಳಾಗಿದೆ.