ಸಿನಿಮಾ ಚಿತ್ರೀಕರಣ ದೃಶ್ಯಗಳಿದ್ದ ಹಾರ್ಡ್ ಡಿಸ್ಕ್ ಕೊಡದೇ ನಿರ್ಮಾಪಕರಿಗೆ ಜೀವ ಬೆದರಿಕೆ

ಬೆಂಗಳೂರು: ಚಿತ್ರೀಕರಣಗೊಂಡ ಸಿನಿಮಾ ದೃಶ್ಯಗಳಿದ್ದ ಹಾರ್ಡ್ ಡಿಸ್ಕ್ ಕೊಡದೇ ನಿರ್ಮಾಪಕರಿಗೆ ಜೀವ ಬೆದರಿಕೆ ಹಾಕಿದ್ದ ಛಾಯಾಗ್ರಾಹಕನ ವಿರುದ್ಧ ಚೆನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ನಿರ್ಮಾಪಕಿ ಪಿ.ಆರ್. ರಾಜಲಕ್ಷ್ಮಿ ಅವರು ಛಾಯಾಗ್ರಾಹಕ ರಿಷಿಕೇಶ್ ವಿರುದ್ಧ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ‘ಸಮುದ್ರಂ’ ಚಿತ್ರದ ತಾಂತ್ರಿಕ ಜವಾಬ್ದಾರಿಯನ್ನು ರಿಷಿಕೇಶ್ ವಹಿಸಿಕೊಂಡಿದ್ದು, ಇದಕ್ಕಾಗಿ ಹಂತ ಹಂತವಾಗಿ 19 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ. ಆದರೆ, ಸಿನಿಮಾ ಚಿತ್ರೀಕರಣ ಅರ್ಧ ಮುಗಿಯುವಷ್ಟರಲ್ಲಿ ಚಿತ್ರತಂಡದಿಂದ ರಿಷಿಕೇಶ್ ದೂರ ಸರಿದಿದ್ದಾರೆ.

ನಾನು ಹೇಳಿದವರನ್ನು ಸಹ ನಿರ್ಮಾಪಕರನ್ನಾಗಿ ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ ಚಿತ್ರೀಕರಣ ದೃಶ್ಯಗಳಿರುವ ನಾಲ್ಕು ಹಾರ್ಡ್ ಡಿಸ್ಕ್ ಕೊಡುವುದಿಲ್ಲ. ಉಳಿದ ಕೆಲಸ ಪೂರ್ಣ ಮಾಡುವುದಿಲ್ಲ ಎಂದು ಹೇಳಿದ್ದಾರೆ. 10 ತಿಂಗಳಿಂದ ರಿಷಿಕೇಶ್ ಹಾರ್ಡ್ ಡಿಸ್ಕ್ ಕೊಡದೆ ಸತಾಯಿಸುತ್ತಿದ್ದು, ಅವಾಚ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ನಿರ್ಮಾಪಕಿ ಪಿ.ಆರ್. ರಾಜಲಕ್ಷ್ಮಿ ದೂರು ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read