ಜೀನ್ಸ್ ಪ್ಯಾಂಟ್ ಧರಿಸಲು ಇಚ್ಚಿಸುವವರು ಈ ಸೂಕ್ಷ್ಮ ವಿಚಾರಗಳ ಕಡೆಗೂ ಹರಿಸಿ ಗಮನ

ಕಾಲೇಜ್ ಹುಡುಗಿಯರಿಗೆ, ಕೆಲಸಕ್ಕೆ ಹೋಗುವ ಯುವತಿಯರಿಗೆ ಅಚ್ಚುಮೆಚ್ಚಿನ ದಿರಿಸು ಈ ಜೀನ್ಸ್ ಪ್ಯಾಂಟ್. ಜೀನ್ಸ್ ಪ್ಯಾಂಟ್ ನಲ್ಲಿ ಫುಲ್ ಹಾಗು ಮುಕ್ಕಾಲು ಭಾಗದ ಪ್ಯಾಂಟ್ ಗಳು ಚಾಲ್ತಿಯಲ್ಲಿವೆ. ಜೀನ್ಸ್ ಧರಿಸಿ ಖುಷಿ ಪಡುವ ಯುವತಿಯರನ್ನು ನಾವಿಂದು ಕಾಣಬಹುದಾಗಿದೆ.

ಜೀನ್ಸ್, ಪ್ರಯಾಣದ ವೇಳೆ ಸುಖಕರ ಮತ್ತು ಹಿತಕರ. ಕಾಲೇಜ್ ವಿದ್ಯಾರ್ಥಿನಿಯರಿಗೆ, ಉದ್ಯೋಗಸ್ಥ ಮಹಿಳೆಯರಿಗೆ ಮೇನ್ಟೇನ್ ಮಾಡುವುದೂ ಸುಲಭ. ಇಂದಿನ ದಿನಗಳಲ್ಲಿ ಮಹಾ ನಗರಗಳಲ್ಲಷ್ಟೇ ಅಲ್ಲ ಚಿಕ್ಕ ಪುಟ್ಟ ಪಟ್ಟಣಗಳಲ್ಲೂ ಯುವತಿಯರು ಜೀನ್ಸ್ ಧರಿಸುವುದು ಸಾಮಾನ್ಯವಾಗಿದೆ.

ಸ್ಟ್ರೆಚ್, ಸ್ಕಿನ್ನಿ ಮತ್ತು ಕಾರ್ಗೋ ಜೀನ್ಸ್ ಗಳು ಅದೇ ರೀತಿ ಬೂಟ್ ಕಟ್, ನ್ಯಾರೋ ಕಟ್, ಸ್ಟ್ರೇಟ್ ಕಟ್ ಮುಂತಾದ ವಿನ್ಯಾಸಗಳಂತೂ ಮಾನಿನಿಯರನ್ನು ವಿಪರೀತ ಸೆಳೆಯುತ್ತವೆ. ಆದರೆ ಜೀನ್ಸ್ ಪ್ಯಾಂಟ್ ಧರಿಸಲು ಇಚ್ಚಿಸುವವರು ಹಲವಾರು ಸೂಕ್ಷ್ಮ ವಿಚಾರಗಳ ಕಡೆಗೂ ಗಮನ ಹರಿಸಬೇಕಾಗುತ್ತದೆ. ತಮ್ಮ ಶರೀರದ ಬಣ್ಣ ಮತ್ತು ಎತ್ತರಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಂಡರೆ ಅದು ದೇಹ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಡಾರ್ಕ್ ಬಣ್ಣ ಹೊಂದಿರುವ ಜೀನ್ಸ್ ಗಳು ಕಾಲುಗಳು ಉದ್ದವಾಗಿ ಕಾಣುವಂತೆ ಬಿಂಬಿಸುತ್ತವೆ. ಅದೇ ರೀತಿ ಸ್ವಲ್ಪ ಎತ್ತರವಿರುವ ಶೂ, ಸ್ಯಾಂಡಲ್ ಗಳನ್ನು ಧರಿಸಿದಾಗ ಜೀನ್ಸ್ ಪ್ಯಾಂಟ್ ನ ಅಂದ ಹೆಚ್ಚಿಸುತ್ತವೆ. ತೀರಾ ಮೈಗಂಟಿಕೊಳ್ಳುವಂತಹ ಜೀನ್ಸ್ ಧರಿಸಿ ರಕ್ತ ಸಂಚಾರವಾಗದೆ ಕೆಲವರು ತೊಂದರೆಯನ್ನನುಭವಿಸಿದ ಉದಾಹರಣೆಗಳಿದ್ದು, ಈ ಕುರಿತು ಎಚ್ಚರಿಕೆ ವಹಿಸಬೇಕಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read