‘ಎಣ್ಣೆ’ ಹೊಡೆಯುವವರಿಗೆ ಸಿಗುತ್ತೆ ಉಚಿತ ಸರ್ವಿಸ್; ಆಟೋದ ಮೇಲೆ ಹೀಗೊಂದು ವಿಭಿನ್ನ ಬರಹ

ಮದ್ಯಪಾನ ಪ್ರಿಯರಿಗೆ ಎದುರಾಗುವ ದೊಡ್ಡ ಸಮಸ್ಯೆ ಎಂದರೆ ಕುಡಿದಾದ ಬಳಿಕ ವಾಹನ ಓಡಿಸುವುದು. ಹಾಗೊಮ್ಮೆ ಹೇಗೋ ಕಷ್ಟ ಪಟ್ಟು ವಾಹನ ಓಡಿಸಿಕೊಂಡು ಹೋದರು ಕೂಡ ಪೊಲೀಸರ ಕೈಗೆ ಸಿಕ್ಕಿ ಬಿದ್ದರೆ ಅದಕ್ಕಿಂತ ದೊಡ್ಡ ಸಮಸ್ಯೆ ಮತ್ತೊಂದಿಲ್ಲ.

ಹೀಗಾಗಿಯೇ ಬಹುತೇಕರು ತಮ್ಮ ತಮ್ಮ ಮನೆಗಳಲ್ಲಿಯೇ ಮದ್ಯಪಾನ ಮಾಡಲು ಬಯಸುತ್ತಾರೆ. ಯಾಕೆಂದರೆ ಒಂದೊಮ್ಮೆ ಪೊಲೀಸರ ಕೈಯಿಂದ ತಪ್ಪಿಸಿಕೊಂಡರೂ ಸಹ ಮದ್ಯದ ಅಮಲಿನಲ್ಲಿ ಅಪಘಾತವಾದರೆ ಹೇಗೋ ಎಂಬ ಭೀತಿಯೂ ಕಾಡುತ್ತಿರುತ್ತದೆ.

ಇದಕ್ಕೆ ಪರಿಹಾರವೆಂಬಂತೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಅಜೆಕಾರುವಿನಲ್ಲಿರುವ ರಚನಾ ಬಾರ್ ಅಂಡ್ ರೆಸ್ಟೋರೆಂಟ್ ಮಾರ್ಗ ಒಂದನ್ನು ಹುಡುಕಿಕೊಂಡಿದೆ ಎನ್ನಲಾಗಿದ್ದು, ತಮ್ಮಲ್ಲಿಗೆ ಬರುವವರಿಗೆ ಉಚಿತ ವಾಹನದ ವ್ಯವಸ್ಥೆ ಎಂದು ಆಟೋ ಒಂದರ ಮೇಲೆ ಬೋರ್ಡ್ ಹಾಕಲಾಗಿದೆ. ಈ ಬೋರ್ಡ್ ಹೊಂದಿರುವ ಆಟೋದ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆದರೆ ಇದು ಎಷ್ಟರಮಟ್ಟಿಗೆ ನಿಜ ಎಂಬುದು ತಿಳಿದು ಬಂದಿಲ್ಲ.

ಈ ಬಾರ್ ಬಹಳ ಹಿಂದೆಯೇ ಬಂದ್ ಆಗಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಆದರೆ ಹಳೆಯ ಫೋಟೋ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ಖಂಡಿತ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read