ದಾಂಪತ್ಯ ಜೀವನದಲ್ಲಿ ಸಮಸ್ಯೆ ಎದುರಿಸುತ್ತಿರುವವರು ಈ ದೇಗುಲಕ್ಕೆ ಒಮ್ಮೆ ಭೇಟಿ ನೀಡಿ

ತಮಿಳುನಾಡಿನ ತಂಜಾವೂರು ಜಿಲ್ಲೆಯ ವಿಲಾಂಕುಲಂ ಎನ್ನುವ ಪಟ್ಟಣದಲ್ಲಿ ಅಕ್ಷಯಪುರೀಶ್ವರರ್ ಎನ್ನುವ ದೇವಾಲಯವಿದೆ. ಇದು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ದೇವಾಲಯವಾಗಿದ್ದು, ಸುಮಾರು 700 ವರ್ಷಗಳ ಐತಿಹ್ಯವನ್ನು ಹೊಂದಿದೆ. ಶನಿದೇವರಿಗೆ ಅರ್ಪಿಸಲಾದ ಈ ದೇವಾಲಯದಲ್ಲಿ ಶಿವನನ್ನು ಕೂಡ ಆರಾಧಿಸಲಾಗುತ್ತದೆ.

ದೈಹಿಕ ಸಮಸ್ಯೆಗಳಿಂದ ಬಳಲುತ್ತಿರುವವರು ಮತ್ತು ಸಾಡೇಸಾತಿ ಶನಿದೋಷ ಇರುವವರು, ಇಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸುತ್ತಾರೆ.

ದಾಂಪತ್ಯ ಜೀವನದಲ್ಲಿ ಸಮಸ್ಯೆ ಎದುರಿಸುತ್ತಿರುವವರು ಕೂಡ ಈ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಶನಿ ದೇವನು 8ನೇ ಸಂಖ್ಯೆಯ ಅಧಿಪತಿಯಾದ್ದರಿಂದ ಇಲ್ಲಿಗೆ ಭೇಟಿ ನೀಡುವ ಭಕ್ತರು ಶನಿದೇವನಿಗೆ 8 ವಿವಿಧ ರೀತಿಯ ಪೂಜಾ ವಸ್ತುಗಳನ್ನು, 8 ಬಾರಿ ಪೂಜೆಯನ್ನು ಹಾಗೂ ದೇವಾಲಯದ ಗರ್ಭಗುಡಿಯನ್ನು 8 ಬಾರಿ ಸುತ್ತುವ ಮೂಲಕ ಪೂಜೆ ಸಲ್ಲಿಸುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read