ಈ ರಾಶಿಯವರಿಗಿದೆ ಇಂದು ಆಕಸ್ಮಿಕ ಧನಲಾಭದ ಯೋಗ

ಮೇಷ ರಾಶಿ

ಇವತ್ತು ಮನಸ್ಸಿನಲ್ಲಿ ಗೊಂದಲ ಉಂಟಾಗುವುದರಿಂದ ದೃಢ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಣ ಕೊಡು ಕೊಳ್ಳುವಿಕೆ ವ್ಯವಹಾರ ಮಾಡಬೇಡಿ. ಶರೀರ ಮತ್ತು ಮನಸ್ಸಿನಲ್ಲಿ ಒಂದು ರೀತಿಯ ಅಸ್ವಸ್ಥತೆ ಉಂಟಾಗಲಿದೆ.

ವೃಷಭ ರಾಶಿ

ವ್ಯಾಪಾರದಲ್ಲಿ ವೃದ್ಧಿ ಹಾಗೂ ಒಪ್ಪಂದಗಳಿಂದ ಲಾಭವಾಗಲಿದೆ. ಆದಾಯ ಕೂಡ ಹೆಚ್ಚಲಿದೆ. ದಾಂಪತ್ಯ ಜೀವನದಲ್ಲಿ ಸಂತೋಷ ಸಿಗಲಿದೆ. ಮಕ್ಕಳಿಂದ ಶುಭ ಸಮಾಚಾರ ದೊರೆಯಬಹುದು.

ಮಿಥುನ ರಾಶಿ

ಇಂದು ಮಾನಸಿಕ ಮತ್ತು ಶಾರೀರಿಕ ಸ್ವಾಸ್ಥ್ಯ ಉತ್ತಮವಾಗಿರಲಿದೆ. ಉದ್ಯೋಗ ಮತ್ತು ಉದ್ಯಮದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಪ್ರತಿಷ್ಠೆ ಹೆಚ್ಚಾಗಲಿದೆ.

ಕರ್ಕ ರಾಶಿ

ಇವತ್ತು ನಿಮ್ಮ ಭಾಗ್ಯ ವೃದ್ಧಿಸಲಿದೆ ಜೊತೆಗೆ ಆಕಸ್ಮಿಕ ಧನಲಾಭ ಯೋಗವಿದೆ. ವಿದೇಶಕ್ಕೆ ತೆರಳುವ ಉತ್ಸಾಹದಲ್ಲಿರುವವರ ಪ್ರಯತ್ನ ಯಶಸ್ವಿಯಾಗಬಹುದು. ಧಾರ್ಮಿಕ ಕಾರ್ಯ ಅಥವಾ ಯಾತ್ರೆಗಾಗಿ ಹಣ ಖರ್ಚಾಗಲಿದೆ. ಉದ್ಯೋಗಿಗಳಿಗೆ ಕೂಡ ಲಾಭವಾಗಲಿದೆ.

ಸಿಂಹ ರಾಶಿ

ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಕೆಟ್ಟ ಆಲೋಚನೆಗಳು ನಿಮ್ಮನ್ನು ಕೆಟ್ಟ ಮಾರ್ಗದೆಡೆಗೆ ಕೊಂಡೊಯ್ಯುವ ಸಾಧ್ಯತೆ ಇದೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಇಷ್ಟದೇವರನ್ನು ಸ್ಮರಿಸಿ.

ಕನ್ಯಾ ರಾಶಿ

ಸಾಮಾಜಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಗೌರವ, ಪ್ರತಿಷ್ಠೆ ದೊರೆಯಲಿದೆ. ಮನರಂಜನೆಯಲ್ಲಿ ಭಾಗಿಯಾಗಲಿದ್ದೀರಿ. ಉದ್ಯಮದಲ್ಲಿ ಪಾಲುದಾರರೊಂದಿಗೆ ಬಾಂಧವ್ಯ ಉತ್ತಮವಾಗಿರುತ್ತದೆ. ಧನಲಾಭದ ಸಾಧ್ಯತೆ ಇದೆ.

ತುಲಾ ರಾಶಿ

ಇಂದು ಆರೋಗ್ಯ ಉತ್ತಮವಾಗಿರಲಿದೆ. ಅನಾರೋಗ್ಯಕ್ಕೆ ತುತ್ತಾದವರು ಕೂಡ ಕೊಂಚ ಚೇತರಿಸಿಕೊಳ್ಳಲಿದ್ದಾರೆ. ಕೆಲಸದಲ್ಲಿ ಸಫಲತೆ ಮತ್ತು ಯಶಸ್ಸು ನಿಶ್ಚಿತ. ವಿರೋಧಿಗಳು ಮತ್ತು ಪ್ರತಿಸ್ಪರ್ಧಿಗಳ ವಿರುದ್ಧ ಗೆಲುವು ಸಿಗಲಿದೆ.

ವೃಶ್ಚಿಕ ರಾಶಿ

ಇವತ್ತು ಪ್ರವಾಸ ಕೈಗೊಳ್ಳಬೇಡಿ. ಆರೋಗ್ಯದ ಬಗ್ಗೆ ಚಿಂತಿತರಾಗುತ್ತೀರಿ. ಮಕ್ಕಳ ವಿಚಾರದಲ್ಲಿ ಸಮಸ್ಯೆಗಳು ಎದುರಾಗಬಹುದು. ಯಾವುದೇ ವಿವಾದದಲ್ಲಿ ಸಿಲುಕಿಕೊಳ್ಳಬೇಡಿ. ಆರ್ಥಿಕ ವ್ಯವಹಾರಕ್ಕೆ ಸಮಯ ಉತ್ತಮವಾಗಿದೆ.

ಧನು ರಾಶಿ

ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಮನಸ್ಸು ವ್ಯಾಕುಲಗೊಳ್ಳುತ್ತದೆ. ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಿ. ನಿದ್ರೆಯ ಕೊರತೆ ಕಾಡಬಹುದು. ಜಲಾಶಯಗಳಿಂದ ದೂರವಿರಿ.

ಮಕರ ರಾಶಿ

ಇವತ್ತು ಶತ್ರುಗಳನ್ನು ಮಣಿಸುತ್ತೀರಿ. ಹೊಸ ಕಾರ್ಯ ಆರಂಭಿಸಬಹುದು. ವ್ಯಾಪಾರದಲ್ಲಿ ಲಾಭವಾಗಲಿದೆ. ಮನಸ್ಸಿನ ಗೊಂದಲ ನಿವಾರಣೆಯಾಗಲಿದೆ. ಬೆಟ್ಟಿಂಗ್ ನಲ್ಲಿ ಹಣ ತೊಡಗಿಸಿದರೆ ಲಾಭ ದೊರೆಯಬಹುದು.

ಕುಂಭ ರಾಶಿ

ಇವತ್ತು ಯಾವುದೇ ಮಹತ್ವದ ನಿರ್ಣಯ ಕೈಗೊಳ್ಳಬೇಡಿ. ಮಾತಿನ ಮೇಲೆ ಹಿಡಿತ ಇಲ್ಲದೇ ಇರುವುದರಿಂದ ಕುಟುಂಬ ಸದಸ್ಯರ ಜೊತೆಗೆ ಕಲಹ ಉಂಟಾಗಬಹುದು. ಧಾರ್ಮಿಕ ಕಾರ್ಯಗಳಿಗಾಗಿ ಹಣ ಖರ್ಚಾಗಲಿದೆ. ಆರೋಗ್ಯದ ಬಗ್ಗೆ ಗಮನವಿರಲಿ.

ಮೀನ ರಾಶಿ

ಇವತ್ತು ಆನಂದವಾಗಿ ದಿನ ಕಳೆಯಲಿದ್ದೀರಿ. ಹೊಸ ಕಾರ್ಯ ಕೈಗೊಂಡಲ್ಲಿ ಅದರಲ್ಲಿ ಯಶಸ್ಸು ಕೂಡ ಸಿಗಲಿದೆ. ಧಾರ್ಮಿಕ ಅಥವಾ ಮಂಗಳ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ. ದಾಂಪತ್ಯ ಜೀವನ ಸುಖಮಯವಾಗಿರಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read