ʼಮೈಗ್ರೇನ್ʼ ಸಮಸ್ಯೆ ನಿವಾರಣೆಗೆ ಈ ಯೋಗ ಮದ್ದು

ಮೈಗ್ರೇನ್ ಸಮಸ್ಯೆ ನಿಮ್ಮನ್ನು ಬಿಡದೆ ಕಾಡುತ್ತಿದೆಯೇ. ಇದಕ್ಕೆ ಎಲ್ಲಾ ವೈದ್ಯರ ಔಷಧಗಳನ್ನೂ ಪ್ರಯತ್ನಿಸಿ ನೋಡಿಯಾಯಿತು ಎಂದು ಬೇಸರ ಪಟ್ಟುಕೊಳ್ಳುತ್ತಿದ್ದೀರಾ. ಹಾಗಿದ್ದರೆ ಅದರೊಂದಿಗೆ ಕೆಲವಷ್ಟು ಯೋಗಾಸನಗಳನ್ನೂ ಪ್ರಯತ್ನಿಸಿ ನೋಡಿ.

ಕಮಲ ಮುದ್ರೆಯ ಪದ್ಮಾಸನ ಹಾಕಿ ಕನಿಷ್ಠ ಮೂರು ನಿಮಿಷ ಕುಳಿತುಕೊಳ್ಳಿ. ಇದು ಮನಸ್ಸನ್ನು ನಿರಾಳಗೊಳಿಸಿ ತಲೆನೋವನ್ನು ಕಡಿಮೆ ಮಾಡುತ್ತದೆ. ಪಶ್ಚಿಮೋತ್ತಾಸನದಿಂದ ಮೆದುಳಿಗೆ ವಿರಾಮ ದೊರೆಯುತ್ತದೆ.

ಹೊಟ್ಟೆಯ ಮೇಲೆ ಮಲಗಿ ಕೈಗಳನ್ನು ನೆಲಕ್ಕೆ ಇಟ್ಟು ಒತ್ತಿ ಮೇಲೆ ಏಳುವುದರಿಂದ ಮೆದುಳಿನ ರಕ್ತ ಪರಿಚಲನೆ ಚುರುಕುಗೊಂಡು ತಲೆ ನೋವು ಕಡಿಮೆಯಾಗುತ್ತದೆ. ಸೇತುಮುದ್ರಾ ಭಂಗಿಯಿಂದ ರಕ್ತ ಪರಿಚಲನೆ ಸರಾಗವಾಗಿ ನಡೆಯುತ್ತದೆ.

ಪ್ರಾಣಾಯಾಮ ಎಂದರೆ ಒಂದೇ ತೆರನಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳುವ ಮತ್ತು ಹೊರಬಿಡುವ ಪ್ರಕ್ರಿಯೆಯಿಂದ ದೇಹದ ಎಲ್ಲಾ ಭಾಗಗಳಿಗೂ ಆಮ್ಲಜನಕ ಸರಿಯಾಗಿ ಪೂರೈಕೆಯಾಗುತ್ತದೆ. ಇದರಿಂದ ತಲೆನೋವು ಕಡಿಮೆಯಾಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read