ಎಚ್ಚರ: ಗರ್ಭಾಶಯದ ಕ್ಯಾನ್ಸರ್‌ಗೆ ಕಾರಣವಾಗಬಹುದು ಫ್ಯಾಷನ್‌ಗಾಗಿ ಮಾಡುವ ಈ ಕೆಲಸ…!

ಕೂದಲು ಅಂದವಾಗಿ, ದಟ್ಟವಾಗಿ, ಹೊಳೆಯುತ್ತಿರಬೇಕು ಅನ್ನೋದು ನಮ್ಮೆಲ್ಲರ ಆಸೆ. ಇದಕ್ಕಾಗಿ ಮಹಿಳೆಯರಂತೂ ಹೇರ್ ಕಲರಿಂಗ್, ಹೇರ್ ಸ್ಟ್ರೈಟನಿಂಗ್ ಮತ್ತು ಹೇರ್ ಸ್ಮೂತ್ ಮಾಡಿಸಿಕೊಳ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಟ್ರೆಂಡ್‌ ಮತ್ತಷ್ಟು ಹೆಚ್ಚಿದೆ. ಈ ಪ್ರಕ್ರಿಯೆಯಲ್ಲಿ ಅನೇಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ಎಲ್ಲಾ ವಯಸ್ಸಿನ ಜನರ ಫ್ಯಾಷನ್ ಪ್ರವೃತ್ತಿಯ ಭಾಗವಾಗುತ್ತಿದೆ.

ಆದರೆ ಈ ಪ್ರಕ್ರಿಯೆಗಳು ಅತ್ಯಂತ ಅಪಾಯಕಾರಿ. ಹೇರ್ ಕಲರಿಂಗ್, ಹೇರ್ ಸ್ಟ್ರೈಟ್ನಿಂಗ್ ಮತ್ತು ಹೇರ್ ಸ್ಮೂತ್ ಮಾಡಿಸಿಕೊಳ್ಳದಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಕೂದಲು ನಮ್ಮ ಲುಕ್ ಬದಲಾಯಿಸುತ್ತದೆ ಎಂಬುದೇನೋ ನಿಜ, ಆದರೆ ಕೂದಲನ್ನು ಸ್ಟ್ರೇಟ್‌ನಿಂಗ್‌, ಸ್ಮೂತ್‌ ಮಾಡುವುದರಿಂದ ಕ್ಯಾನ್ಸರ್‌ ಬರಬಹುದು. ಈ ಉತ್ಪನ್ನಗಳು ಫಾರ್ಮಾಲ್ಡಿಹೈಡ್ ಬಿಡುಗಡೆ ಮಾಡುವ ರಾಸಾಯನಿಕಗಳನ್ನು ಹೊಂದಿರುತ್ತವೆ. ಇದರಿಂದಾಗಿ ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ ಎಂದು ತಜ್ಞ ವೈದ್ಯರೇ ಎಚ್ಚರಿಸಿದ್ದಾರೆ.

ಕೂದಲನ್ನು ರೇಷ್ಮೆಯಂತೆ ನಯವಾಗಿ ಮಾಡಲು ವಿಶೇಷ ಉತ್ಪನ್ನಗಳನ್ನು ಬಳಸಲಾಗುತ್ತದೆ. ಇವು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಇದರಲ್ಲಿರುವ ಫಾರ್ಮಾಲ್ಡಿಹೈಡ್‌ನಿಂದ ಬರುವ ಹೊಗೆ,  ಕಣ್ಣು, ಮೂಗು ಮತ್ತು ಗಂಟಲುಗಳಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ. ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಇರಬಹುದು.

ಕೂದಲಿನ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಅತಿಯಾಗಿ ಬಳಸುವುದರಿಂದ ಮಹಿಳೆಯರಲ್ಲಿ ಗರ್ಭಾಶಯದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. 2022ರ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NIH ರೆಕಾರ್ಡ್) ಪ್ರಕಾರ, ರಾಸಾಯನಿಕಗಳ ಬಳಕೆಯ ನಂತರ ಬಿಡುಗಡೆಯಾಗುವ ಹೊಗೆಯು ಗರ್ಭಾಶಯದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ವಾಸ್ತವವಾಗಿ ಎಂಡೊಮೆಟ್ರಿಯಂನ ಅಂಗಾಂಶಗಳಲ್ಲಿ ಕ್ಯಾನ್ಸರ್ ಕೋಶಗಳು ರೂಪುಗೊಂಡಾಗ ಈ ಕ್ಯಾನ್ಸರ್ ಸಂಭವಿಸುತ್ತದೆ. ಇದು ಗರ್ಭಾಶಯದ ಒಳಪದರದಲ್ಲಿದೆ. ಫಾರ್ಮಾಲ್ಡಿಹೈಡ್ ಈ ಕ್ಯಾನ್ಸರ್ ಕೋಶಗಳನ್ನು ಪ್ರಚೋದಿಸುತ್ತದೆ ಮತ್ತು ದೇಹದಲ್ಲಿ ರೂಪಾಂತರವನ್ನು ಉತ್ತೇಜಿಸುತ್ತದೆ.

ಹೇರ್‌ ಕಲರಿಂಗ್‌ನಿಂದ ಮೂತ್ರಕೋಶದ ಕ್ಯಾನ್ಸರ್ ಅಪಾಯ

ಸಂಶೋಧನೆಯ ಪ್ರಕಾರ ಕೂದಲಿಗೆ ಬಣ್ಣ ಹಾಕುವುದು ಮೂತ್ರಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಸುಮಾರು 80 ಪ್ರತಿಶತ ಉತ್ಪನ್ನಗಳನ್ನು ಹೈಡ್ರೋಜನ್ ಪೆರಾಕ್ಸೈಡ್ನಿಂದ ತಯಾರಿಸಲಾಗುತ್ತದೆ. ಇದು ಕಾರ್ಸಿನೋಜೆನಿಕ್ ಸೂತ್ರೀಕರಣವಾಗಿದೆ. ಇದು ಮೂತ್ರಕೋಶದಲ್ಲಿ ಕ್ಯಾನ್ಸರ್ ಅನ್ನು ಉತ್ತೇಜಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read