ಮುಂಬೈ: ಸಿನಿಮಾ ಹಾಲ್‌ನಲ್ಲಿ ಸಿನಿಮಾ ನೋಡುವುದು ವಿಭಿನ್ನ ಅನುಭವ ನೀಡುತ್ತದೆ. ಆದಾಗ್ಯೂ, ಕೆಲವು ರಾಜ್ಯಗಳಲ್ಲಿ, ಟಿಕೆಟ್‌ನ ಬೆಲೆ ದುಬಾರಿಯಾಗಿದೆ. ಅದರ ಬಗ್ಗೆ ವಿವರಿಸುತ್ತಾ, ಟ್ವಿಟರ್ ಬಳಕೆದಾರರಾದ ರಾಧಿಕಾ ಸಂತಾನಂ ಅವರು ಮುಂಬೈನಲ್ಲಿ ಚಲನಚಿತ್ರ ಟಿಕೆಟ್ ದರಗಳು ಹಾಸ್ಯಾಸ್ಪದವಾಗಿವೆ ಎಂಬುದನ್ನು ಹಂಚಿಕೊಂಡಿದ್ದಾರೆ.
ಸ್ವಂತ ಅನುಭವವನ್ನು ವಿವರಿಸಿರುವ ಅವರು, ನಾನು ಟಿಕೆಟ್ಗೆ 150-200 ರೂ. ಕೊಡಬಲ್ಲೆ. ಆದರೆ ಸಂಜೆಯ ಪ್ರದರ್ಶನಕ್ಕೆ 600-1500 ರೂ ನೋಡಿ ನನಗೆ ಭಯವಾಗಿದೆ. ಈ ಟಿಕೆಟ್ ವೆಚ್ಚದ ಜೊತೆಗೆ, ಪಾಪ್‌ಕಾರ್ನ್ ಮತ್ತು ಪಾನೀಯಗಳನ್ನು ಸೇರಿಸಿ ಚಲನಚಿತ್ರವನ್ನು ನೋಡುವುದು ಈ ದಿನಗಳಲ್ಲಿ ನಿಜವಾಗಿಯೂ ದುಬಾರಿ ವ್ಯವಹಾರವಾಗಿದೆ ಎಂದಿದ್ದಾರೆ.
ಅಪ್‌ಲೋಡ್ ಮಾಡಿದ ನಂತರ, ಅವರ ಟ್ವೀಟ್ ವೈರಲ್ ಆಗಿದೆ. ಟ್ವೀಟ್ ಸುಮಾರು 40 ಸಾವಿರ ವೀಕ್ಷಣೆಗಳನ್ನು ಹೊಂದಿದ್ದು ಬಹುತೇಕ ಮಂದಿ ಇವರ ಮಾತನ್ನು ಒಪ್ಪಿಕೊಂಡಿದ್ದಾರೆ. ಮಾಲ್ಗಳಲ್ಲಿ ನೋಡುವ ಬದಲು ಸಾಮಾನ್ಯ ಥಿಯೇಟರ್ನಲ್ಲಿ ನೋಡಿ ಎಂದು ಹಲವರು ಸಲಹೆ ನೀಡಿದ್ದರೆ, ಈ ಪಾಪ್‌ಕಾರ್ನ್, ಅದೂ ಇದೂ ಎಂದು ತಿನ್ನುವುದು ಏಕೆ ? ಸಿನಿಮಾ ಹಾಲ್ನಿಂದ ಹೊರಗೆ ಅಂಗಡಿಗಳಲ್ಲಿ ಇವುಗಳೇ ಅತಿ ಕಡಿಮೆ ಬೆಲೆಗೆ ಸಿಗುತ್ತವೆ. ಸಿನಿಮಾ ನೋಡುವಾಗ ತಿನ್ನಲೇಬೇಕು ಎಂದರೆ ಅಲ್ಲಿಂದ ಖರೀದಿಸಿ ಎಂದಿದ್ದಾರೆ. ಇನ್ನು ಕೆಲವರು ಈ ಸಿನಿಮಾ ಗಿನಿಮಾ ಬಿಟ್ಟು ಒಳ್ಳೆಯ ಹವ್ಯಾಸ ಬೆಳೆಸಿಕೊಂಡು ಆರಾಮಾಗಿ ಇರಿ ಎಂದೂ ಸಲಹೆ ನೀಡಿದ್ದಾರೆ.
https://twitter.com/radhikasan/status/1619250854271545344?ref_src=twsrc%5Etfw%7Ctwcamp%5Etweetembed%7Ctwterm%5E1619250854271545344%7Ctwgr%5E4c54e538a7f87bb8b8cd70f38b22d25d23528d6c%7Ctwcon%5Es1_&ref_url=https%3A%2F%2Fwww.news18.com%2Fbuzz%2Fthis-womans-rant-about-movie-ticket-prices-in-mumbai-is-something-that-netizens-agree-with-6943387.html
https://twitter.com/pradeepNvishnu/status/1619584658865557504?ref_src=twsrc%5Etfw%7Ctwcamp%5Etweetembed%7
https://twitter.com/radhikasan/status/1619250854271545344?ref_src=twsrc%5Etfw%7Ctwcamp%5Etweetembed%7Ctwterm%5E