‘ಆಧಾರ್’ ಫೋಟೋ ವೇಳೆ ಧರಿಸಿದ್ದ ಟೀ ಶರ್ಟ್ ನಿಂದಾಗಿ ಮುಜುಗರಕ್ಕೊಳಗಾಗಿದ್ದಾರೆ ಮಹಿಳೆ…..!

ಸಾಮಾನ್ಯವಾಗಿ ಹಲವರು ತಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ರೇಷನ್ ಕಾರ್ಡ್ ನಲ್ಲಿರುವ ಫೋಟೋ ನೋಡಿ ಬೇಸರಗೊಳ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ ಆಧಾರ್ ಕಾರ್ಡ್ ತೆಗೆಸುವಾಗ ತಾವು ಧರಿಸಿದ್ದ ಟಿ- ಶರ್ಟ್ ನೋಡಿ ಬೇಸರಗೊಂಡಿದ್ದಾರೆ.

ಅಂಜಲಿ ಎಂಬ ಮಹಿಳೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋ ಹಂಚಿಕೊಂಡಿದ್ದು, ಅದರಲ್ಲಿ ಅವರು ‘F**** O***’ ಎಂಬ ಅಕ್ಷರಗಳಿರುವ ಟೀ ಶರ್ಟ್ ಧರಿಸಿದ್ದಾರೆ.

ತಮ್ಮ ಆಧಾರ್ ಕಾರ್ಡ್ ಹಂಚಿಕೊಂಡು ಬರೆದಿರುವ ಅವರು ” ಯಾವುದಾದರೂ ಕೆಲಸಕ್ಕೆ ನನಗೆ ಆಧಾರ್ ಕಾರ್ಡ್ ಬೇಕಾಗುತ್ತದೆ. ನನ್ನ ಐಡಿ ರಿನೀವಲ್ ಮಾಡಿಸುವ ದಿನದಂದು ನಾನು ಅದೇಗೆ ‘F* O*’ ಎಂದು ಬರೆಯುವ ಟೀ ಶರ್ಟ್ ಅನ್ನು ಆಕಸ್ಮಿಕವಾಗಿ ಧರಿಸಿದ್ದೆನೋ…… ಬಹುಶಃ ನನ್ನ ಜೀವನದುದ್ದಕ್ಕೂ ಇದರೊಂದಿಗೆ ಅಂಟಿಕೊಂಡಿರುತ್ತೇನೆ” ಎಂದಿದ್ದಾರೆ.

ಈ ಫೋಟೋ ವೈರಲ್ ಆಗಿದ್ದು, ಅನೇಕರು ಫೋಟೋವನ್ನ ಆನ್ ಲೈನ್ ನಲ್ಲಿ ಬದಲಾಯಿಸಬಹುದೆಂದು ಸಲಹೆ ನೀಡಿದ್ದಾರೆ. “ಇದು ನಿಮ್ಮ ಜೀವನದಲ್ಲಿ ನೀವು ಮಾಡಿದ ಅತ್ಯುತ್ತಮ ಕೆಲಸ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read