ಎಲ್ಲವೂ ಇದ್ದು ಏನೂ ಇಲ್ಲ ಎಂದು ಕೊರಗುವವರೇ ಹೆಚ್ಚಿನ ಮಂದಿ. ಅಂಥವರ ಪೈಕಿ ಕೆಲವು ವ್ಯಕ್ತಿಗಳು ವಿಶೇಷವಾಗಿ ಕಾಣಿಸುತ್ತಾರೆ. ಕೈಕಾಲು ಗಟ್ಟಿಯಾಗಿದ್ದರೂ ಕೆಲಸ ಮಾಡಲು ಸೋಮಾರಿತನ ತೋರುತ್ತಾ, ನನಗೆ ಏನೂ ಇಲ್ಲ ಎನ್ನುವ ವ್ಯಕ್ತಿಗಳ ನಡುವೆ ವಿಶೇಷಚೇತನ ವ್ಯಕ್ತಿಯೊಬ್ಬರ ವಿಡಿಯೋ ವೈರಲ್ ಆಗಿದ್ದು, ಇದು ಎಲ್ಲವೂ ಇರುವವರಿಗೆ ಬುದ್ಧಿ ಹೇಳುವಂತಿದೆ.
ಒಂದು ಕೈಯಲ್ಲಿ ಊರುಗೋಲನ್ನು ಹಿಡಿದುಕೊಂಡು ಇನ್ನೊಂದು ಕೈಯಿಂದ ಬಂಡಿಯನ್ನು ಎಳೆಯುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಜೀವನ ಸ್ಫೂರ್ತಿ ಎಂದರೇನು ಎನ್ನುವುದಕ್ಕೆ ಇವರೇ ಉದಾಹರಣೆ ಎನ್ನುವಂತೆ ಈ ವಿಡಿಯೋ ತೋರಿಸುತ್ತದೆ. ಜೀವನದಲ್ಲಿ ಚಿಕ್ಕಪುಟ್ಟ ಸಮಸ್ಯೆ ತಲೆದೋರಿದರೂ ಜೀವನವೇ ಮುಗಿದು ಹೋಯಿತು ಎನ್ನುವವರಿಗೆ ಈ ವ್ಯಕ್ತಿ ಸ್ಫೂರ್ತಿಯಾಗುತ್ತಾರೆ.
ಈಗ ವೈರಲ್ ಆಗಿರುವ ವಿಡಿಯೋವನ್ನು ಆಮೀರ್ ಖಾನ್ ಎಂಬ ಬಳಕೆದಾರರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. 11 ಸೆಕೆಂಡ್‌ಗಳ ಈ ವಿಡಿಯೋದಲ್ಲಿ, ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಯೊಬ್ಬರು ಭಾರವಾದ ಬಂಡಿಯನ್ನು ಒಂದು ಕೈಯಿಂದ ಅದರ ಮೇಲೆ ಬಟ್ಟೆಗಳನ್ನು ಎಳೆಯುವುದನ್ನು ಕಾಣಬಹುದು. ಸರಿಯಾಗಿ ನಡೆಯಲೆಂದು ಇನ್ನೊಂದು ಕೈಯಲ್ಲಿ ಊರುಗೋಲನ್ನು ಹಿಡಿದಿರುವುದನ್ನು ನೋಡಬಹುದು.
ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವಿಡಿಯೋ ಸುಮಾರು ಎರಡು ಲಕ್ಷ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಟ್ವಿಟರ್ ಬಳಕೆದಾರರು ಕಾಮೆಂಟ್‌ಗಳ ವಿಭಾಗದಲ್ಲಿ ಇವರನ್ನು ಶ್ಲಾಘಿಸಿದ್ದಾರೆ.
https://twitter.com/AamirKhanfa/status/1615404236384374790?ref_src=twsrc%5Etfw%7Ctwcamp%5Etweetemb
https://twitter.com/tonaytoni1/status/1615929451325579264?ref_src=twsrc%5Etfw%7Ctwcamp%5Etweetembed%7Ctwterm%5E1615929451325579264%7Ctwgr%5E93ca79a7c7e0512fd829893fd8eace869fc0958a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-video-of-a-specially-abled-man-pulling-a-cart-with-one-hand-will-make-you-count-your-blessings-2324265-2023-01-20
Bless him
— ranjan sapra (@sapra_ranjan) January 19, 2023