ತ್ವಚೆಯ ಮೇಲಿನ ಪಿಗ್ಮೆಂಟೇಷನ್‌ ಮಾಯ ಮಾಡುತ್ತೆ ಈ ತರಕಾರಿ

ಮಹಿಳೆಯರಲ್ಲಿ ತ್ವಚೆಯ ಸಮಸ್ಯೆ ಕಾಣುವುದು ಸಹಜ. ಹೀಗಾಗಿ ಮನೆಯಲ್ಲೇ ಆಹಾರ ಸೇವನೆಯಲ್ಲಿ ಸ್ವಲ್ಪ ನಿಗಾ ವಹಿಸಿದರೆ ಆರೋಗ್ಯಯುತವಾದ ಮತ್ತು ಕೋಮಲವಾದ ತ್ವಚೆಯನ್ನು ಹೊಂದಬಹುದು. ಪ್ರತಿನಿತ್ಯ ತರಕಾರಿಗಳನ್ನು ಸವಿಯುವುದರಿಂದ ತ್ವಚೆಯಲ್ಲಿ ಬದಲಾವಣೆ ಕಾಣಬಹುದು.

ಕ್ಯಾರೆಟ್‌ – ಟೊಮೇಟೊ

ಕ್ಯಾರೆಟನ್ನು ಆಹಾರದೊಂದಿಗೆ ಸೇವಿಸುವುದರಿಂದ ತ್ವಚೆಗೆ ಗುಲಾಬಿ ಬಣ್ಣದ ಹೊಳಪು ಬರುತ್ತದೆ. ಟೊಮೇಟೊವನ್ನು ಬೇಯಿಸಿ ತಿನ್ನುವುದರಿಂದ ತ್ವಚೆಗೆ ಹೊಸ ಹೊಳಪು ಬರುತ್ತದೆ.

ಸೌತೆಕಾಯಿ

ಸೌತೆಕಾಯಿಯನ್ನು ಸೇವಿಸುವುದರಿಂದ ತ್ವಚೆಯು ಗೌರವ ವರ್ಣಕ್ಕೆ ತಿರುಗುತ್ತದೆ.

ಬೆಂಡೆಕಾಯಿ

ವಿಟಮಿನ್‌ ಸಿ ಇರುವ ಬೆಂಡೆಕಾಯಿಯನ್ನು ಸೇವಿಸುವುದರಿಂದ ತ್ವಚೆಯ ಮೇಲಿನ ಪಿಗ್ಮೆಂಟೇಷನ್‌ ಮಾಯವಾಗುತ್ತದೆ.

ಹೀರೇಕಾಯಿ

ಹೀರೇಕಾಯಿಯನ್ನು ತಿನ್ನುವುದರಿಂದ ತ್ವಚೆಯ ಮೇಲೆ ಮೊಡವೆಗಳು ಬರದಂತೆ ತಡೆಯಬಹುದು.

ಹಾಗಲಕಾಯಿ

ವಿಟಮಿನ್‌ ಎ, ಬಿ1, ಬಿ2 ಇರುವ ಹಾಗಲಕಾಯಿ ಸೇವಿಸುವುದರಿಂದ ತ್ವಚೆಗೆ ಉಂಟಾಗುವ ಸೋಂಕನ್ನು ತಡೆಯಬಹುದು.

ಎಲೆಕೋಸು

ವಿಟಮಿನ್‌ ಸಿ ಇರುವ ಎಲೆಕೋಸಿನ ಜ್ಯೂಸನ್ನು ಕುಡಿಯುವುದರಿಂದ ತ್ವಚೆಗೆ ಕ್ಲೆನ್ಸ್‌ ಮಾಡಿದಂತಾಗುತ್ತದೆ.

ಕ್ಯಾಪ್ಸಿಕಂ

ಕ್ಯಾಪ್ಸಿಕಂ ಮತ್ತು ಕ್ಯಾರೆಟನ್ನು ಸೇರಿಸಿ ಜ್ಯೂಸ್‌ ಮಾಡಿ ಕುಡಿಯುವುದರಿಂದ ತ್ವಚೆಯ ಮೇಲಿನ ರಾಷಸ್‌ ಕಡಿಮೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read