RRR ತಂಡವನ್ನು ವೀಣೆಯ ಮೂಲಕ ಅಭಿನಂದಿಸಿದ ಕಲಾವಿದೆ: ನೆಟ್ಟಿಗರ ಶ್ಲಾಘನೆ

ಎಸ್ಎಸ್ ರಾಜಮೌಳಿ ಅವರ RRRನ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭಾರತವನ್ನು ಹೆಮ್ಮೆಪಡುವಂತೆ ಮಾಡಿದೆ. ಎಂಎಂ ಕೀರವಾಣಿಯವರ ನಾಟು ನಾಟು ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಭಾರತೀಯ ನಿರ್ಮಾಣದ ಮೊದಲ ಟ್ರ್ಯಾಕ್ ಆಯಿತು.

ಅತೀವ ಸಂತಸ ಮತ್ತು ಸಂಭ್ರಮದಲ್ಲಿರುವ ಭಾರತೀಯರು ಐತಿಹಾಸಿಕ ಗೆಲುವನ್ನು ಸಂಭ್ರಮಿಸುವುದರಲ್ಲಿ ನಿರತರಾಗಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

ಇದೀಗ ಖ್ಯಾತ ಸಂಗೀತಗಾರ್ತಿ ವೀಣಾ ಶ್ರೀವಾಣಿ ಅವರು ನಾಟು ನಾಟು ಆಸ್ಕರ್ ಪ್ರಶಸ್ತಿಗೆ ತಮ್ಮ ಗೌರವವನ್ನು ಹಂಚಿಕೊಂಡಿದ್ದಾರೆ. ಅವರು ನಾಟು ನಾಟು ಹಾಡನ್ನು ವೀಣೆಯಲ್ಲಿ ನುಡಿಸಿದ್ದು, ಜನರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಶ್ರೀವಾಣಿ ವೀಣೆಯಲ್ಲಿ ನಾಟು ನಾಟು ನುಡಿಸುವ ಮೂಲಕ ಬಳಕೆದಾರರನ್ನು ಸಂತೋಷಪಡಿಸಿದುದು ಮಾತ್ರವಲ್ಲದೆ ಪೆಪ್ಪಿ ಟ್ರ್ಯಾಕ್‌ಗೆ ಭಾವಪೂರ್ಣ ಆವೃತ್ತಿಯನ್ನು ನೀಡಿದ್ದಾರೆ.

ನಮ್ಮ RRR ತಂಡವನ್ನು ಅಭಿನಂದಿಸೋಣ. ನಾಟು ನಾಟು ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಭಾರತೀಯ ಚಲನಚಿತ್ರದ ಮೊದಲ ಹಾಡು ಎಂದು ನನಗೆ ತುಂಬಾ ಹೆಮ್ಮೆ ಇದೆ ಎಂದು ಶ್ರೀವಾಣಿ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read