ಎಲ್ಲಿಯೂ ಕಾಣದ ದೊಡ್ಡ ದೊಡ್ಡ ರುಚಿಕಟ್ಟಾದ ಸಮೋಸಾ ಕೇವಲ 25 ರೂಪಾಯಿಗೆ

ಮುಜಾಫರ್‌ನಗರ: ಸಮೋಸಾ ಎಂದರೆ ದೇಸಿಗಳು ಹೆಚ್ಚು ಇಷ್ಟಪಡುವ ಭಾರತೀಯ ತಿಂಡಿ! ತಮ್ಮ ಗ್ರಾಹಕರಿಗೆ ‘ಗರಂ ಗರಂ’ ಸಮೋಸವನ್ನು ನೀಡುವ ಹಲವಾರು ಅಂಗಡಿಗಳನ್ನು ಭಾರತದ ಮೂಲೆ ಮೂಲೆಗಳಲ್ಲಿ ಕಾಣಬಹುದು.

ಆದರೆ, ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿರುವ ಈ ಒಂದು ಅಂಗಡಿ ಸಮೋಸಾ ಮಾತ್ರ ಎಲ್ಲಕ್ಕಿಂತ ರುಚಿ. ಅದನ್ನು ಸವಿಯಲು ಜನರು ಸರದಿಯಲ್ಲಿ ನಿಲ್ಲುತ್ತಾರೆ. ರೂರ್ಕಿ ರಸ್ತೆಯ ಚಂದ್ರ ಚಿತ್ರಮಂದಿರದ ಪಕ್ಕದಲ್ಲಿರುವ ‘ರಾಜು ಭಾಯ್ ಸಮೋಸಾ ವಾಲೆ’ ಕಳೆದ 25 ವರ್ಷಗಳಿಂದ ಮುಜಾಫರ್‌ನಗರದಲ್ಲಿ ಅತಿ ದೊಡ್ಡ ಸಮೋಸಾ ಮಾರಾಟಕ್ಕೆ ಹೆಸರುವಾಸಿಯಾಗಿದೆ.

ಅವರ ಬಳಿ ಎರಡು ಅಳತೆಯ ಸಮೋಸಗಳಿವೆ. ಚಿಕ್ಕ ಸಮೋಸ ರೂ. 15 ಹಾಗೂ ದೊಡ್ಡವಕ್ಕೆ ರೂ. 25. ಈ ಸಮೋಸಾಗಳ ತೂಕವು ಗಾತ್ರಕ್ಕೆ ಅನುಗುಣವಾಗಿ ಬದಲಾಗುತ್ತದೆ ಮತ್ತು ಇದು 100 ರಿಂದ 200 ಗ್ರಾಂಗಳವರೆಗೆ ಇರುತ್ತದೆ.

ಅಂಗಡಿ ಮಾಲೀಕ ಮನು ಅವರು 70 ವರ್ಷಗಳ ಹಿಂದೆ ಇಲ್ಲಿ ಅಂಗಡಿಯನ್ನು ತೆರೆದರು, ಮೊದಲು ತರಕಾರಿ ಮಾರುತ್ತಿದ್ದರು. ನಂತರ ಸಮೋಸಾದ ಮೇಲೆ ಪ್ರೀತಿ ನೋಡಿ ಅದನ್ನು ಆರಂಭಿಸಿದ್ದು, ಅತ್ಯಂತ ಕಡಿಮೆ ಬೆಲೆಗೆ ಬೃಹದಾಕಾರದ ಅತ್ಯಂತ ರುಚಿಕಟ್ಟಾದ ಸಮೋಸಾ ನೀಡುತ್ತಿರುವ ಕಾರಣ, ಇದು ಬಹಳ ಪ್ರಸಿದ್ಧಿ ಹೊಂದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read