ಮನಿ ಪ್ಲಾಂಟ್‌ಗಿಂತಲೂ ಉತ್ತಮ ಫಲ ತರಬಲ್ಲದು ಈ ವೃಕ್ಷ; ಶನಿದೇವರ ಕೃಪೆಗಾಗಿ ಇದನ್ನು ಮನೆಯಲ್ಲಿ ನೆಟ್ಟುಬಿಡಿ !

ಮನೆಯ ಒಳಗೆ ಮತ್ತು ಹೊರಗೆ ಗಿಡಗಳನ್ನು ಬೆಳೆಸುವ ಪ್ರವೃತ್ತಿ ಈಗ ಹೆಚ್ಚಾಗಿದೆ. ಈ ಸಸ್ಯಗಳು ಮನೆಯಲ್ಲಿ ತಾಜಾತನ ಮತ್ತು ಧನಾತ್ಮಕತೆಯನ್ನು ತರುತ್ತವೆ. ಅಷ್ಟೇ ಅಲ್ಲ ಇವುಗಳ ಹಚ್ಚ ಹಸಿರು ಬಣ್ಣ, ಅಂದದ ಹೂವುಗಳು ನಮ್ಮ ಒತ್ತಡವನ್ನು ಕಡಿಮೆ ಮಾಡಬಲ್ಲ ಸಾಮರ್ಥ್ಯ ಹೊಂದಿವೆ.

ಇದಲ್ಲದೆ ಗಿಡಗಳನ್ನು ನೆಡುವುದರಿಂದ ಇನ್ನೂ ಹಲವಾರು ಪ್ರಯೋಜನಗಳಿವೆ. ಹಿಂದೂ ಧರ್ಮದಲ್ಲಿ ಅನೇಕ ಮರಗಳು ಮತ್ತು ಸಸ್ಯಗಳನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಅವುಗಳಲ್ಲಿ ಅನೇಕ ಸಸ್ಯಗಳನ್ನು ನಾವು ಪೂಜಿಸುತ್ತೇವೆ.

ಈ ಮರಗಳು ಮತ್ತು ಸಸ್ಯಗಳು ದೇವರು ಮತ್ತು ದೇವತೆಗಳ ಆಶೀರ್ವಾದವನ್ನು ತರುತ್ತವೆ. ಜಾತಕದಲ್ಲಿನ ಅನೇಕ ಗ್ರಹ ದೋಷಗಳನ್ನು ತೆಗೆದುಹಾಕುತ್ತವೆ. ಶನಿದೇವರಿಗೆ ತುಂಬಾ ಪ್ರಿಯವಾದ ಸಸ್ಯವೊಂದಿದೆ. ವಾಸ್ತು ಶಾಸ್ತ್ರದ ಪ್ರಕಾರ ಇದು  ಸಂಪತ್ತು ಮತ್ತು ಸಮೃದ್ಧಿಯನ್ನು ನೀಡಬಲ್ಲದು.

ಮನೆಯಲ್ಲಿ ಈ ಗಿಡವಿದ್ದರೆ ಧನ-ಧಾನ್ಯಗಳಿಗೆ ಯಾವತ್ತೂ ಕೊರತೆಯಾಗುವುದಿಲ್ಲ. ಆ ಕುಟುಂಬ ಸದಾ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತದೆ. ಸಂಪತ್ತು, ಸ್ಥಾನಮಾನ, ಪ್ರತಿಷ್ಠೆ ಎಲ್ಲವೂ ಅವರಿಗೆ ದೊರೆಸುತ್ತೆ ಶಮಿ ಗಿಡ.

ವಾಸ್ತು ಶಾಸ್ತ್ರದ ಪ್ರಕಾರ, ಶಮಿ ಗಿಡವನ್ನು ಮನೆಯಲ್ಲಿ ನೆಡುವುದರಿಂದ ವ್ಯಕ್ತಿಯ ಅದೃಷ್ಟವನ್ನು ಬದಲಾಯಿಸಬಹುದು. ನ್ಯಾಯದ ದೇವರಾದ ಶನಿದೇವನಿಗೆ ಶಮಿ ಗಿಡ ಅತ್ಯಂತ ಅಚ್ಚುಮೆಚ್ಚು. ಇದನ್ನು ಮನೆಯಲ್ಲಿ ಇರಿಸಿದರೆ ಶನಿಯು ಜಾತಕದಲ್ಲಿ ಬಲಗೊಳ್ಳುತ್ತಾನೆ. ಸಾಡೇ ಸಾತ್‌ ಎದುರಿಸುತ್ತಿರುವವರು ಈ ಗಿಡವನ್ನು ತಮ್ಮ ಮನೆಯಲ್ಲಿ ನೆಡಬೇಕು. ಅಲ್ಲದೆ ಪ್ರತಿನಿತ್ಯ ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ಶನಿಯ ಬಾಧೆಗಳಿಂದ ಮುಕ್ತಿ ಸಿಗುತ್ತದೆ.  ಶನಿದೇವನು ಸಂತುಷ್ಟನಾಗುತ್ತಾನೆ ಮತ್ತು ಶುಭ ಫಲಿತಾಂಶಗಳನ್ನು ನೀಡುತ್ತಾನೆ.

ಅಷ್ಟೇ ಅಲ್ಲ ಮನೆಯಲ್ಲಿ ಶಮಿ ಗಿಡವನ್ನು ನೆಟ್ಟರೆ ಲಕ್ಷ್ಮೀದೇವಿಯೂ ಪ್ರಸನ್ನಳಾಗುತ್ತಾಳೆ. ವಾಸ್ತು ಪ್ರಕಾರ, ಶಮಿ ಸಸ್ಯವು ಅತ್ಯಂತ ವೇಗವಾಗಿ ಹಣವನ್ನು ಆಕರ್ಷಿಸುತ್ತದೆ. ಇದನ್ನು ಮನೆಯಲ್ಲಿ ಸ್ಥಾಪಿಸುವುದರಿಂದ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ. ಮನೆಗೆ ಹಣದ ಒಳಹರಿವು ಹೆಚ್ಚಾಗುತ್ತದೆ.

ಮನೆಯ ಮುಖ್ಯದ್ವಾರದ ಬಳಿ ಶಮಿ ಗಿಡ ನೆಡುವುದು ಅತ್ಯಂತ ಶ್ರೇಯಸ್ಕರ. ಮನೆಯಿಂದ ಹೊರಡುವಾಗ ಈ ಸಸ್ಯವು ನಿಮ್ಮ ಬಲಭಾಗದಲ್ಲಿ ಇರುವ ರೀತಿಯಲ್ಲಿ ಅದನ್ನು ನೆಡಬೇಕು. ಮನೆಯ ಮುಖ್ಯದ್ವಾರದಲ್ಲಿ ಶಮಿ ಗಿಡವನ್ನು ನೆಡಲು ಸಾಧ್ಯವಾಗದಿದ್ದರೆ  ಅದನ್ನು ಟೆರೇಸ್‌ನಲ್ಲಿ ಅಥವಾ ಮನೆಯ ದಕ್ಷಿಣ, ಪೂರ್ವ ಅಥವಾ ಈಶಾನ್ಯ ಮೂಲೆಯಲ್ಲಿ ಇರಿಸಬಹುದು. ಶಮಿ ವೃಕ್ಷವನ್ನು ನೆಡಲು ಶನಿವಾರ ಉತ್ತಮ ದಿನ. ಲಕ್ಷ್ಮಿ ಮತ್ತು ಶನಿ ದೇವರನ್ನು ಮೆಚ್ಚಿಸಲು ಪ್ರತಿದಿನ ಸಂಜೆ ಶಮಿ ಗಿಡದ ಬಳಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read