ಪಾತ್ರೆ, ನೆಲದ ಮೇಲಿರುವ ತುಕ್ಕು ಕ್ಲೀನ್ ಮಾಡಲು ಪಾಲಿಸಿ ಈ ಸಲಹೆ

ಅಡುಗೆ ಮಾಡಲು ಹೆಚ್ಚಿನವರು ಸ್ಟೀಲ್ ಪಾತ್ರೆಗಳನ್ನು, ಕಬ್ಬಿಣದ ಪಾತ್ರೆಗಳನ್ನು ಬಳಸುತ್ತಾರೆ. ಆದರೆ ಇವುಗಳ ಮೇಲೆ ನೀರು ಇದ್ದಾಗ, ಅವುಗಳನ್ನು ಬಳಸದಿದ್ದಾಗ ಅವುಗಳಲ್ಲಿ ತುಕ್ಕು ಕಂಡುಬರುತ್ತದೆ. ಇದನ್ನು ಎಷ್ಟೇ ಉಜ್ಜಿದರೂ ಸ್ವಚ್ಛವಾಗುವುದಿಲ್ಲ. ಹಾಗಾಗಿ ಅವುಗಳನ್ನು ಕ್ಲೀನ್ ಮಾಡಲು ಈ ಸಲಹೆ ಪಾಲಿಸಿ.

ಪಾತ್ರೆಗಳ ಮೇಲಿನ ತುಕ್ಕುಗಳನ್ನು ಸ್ವಚ್ಛಗೊಳಿಸಲು ಉಪ್ಪು ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ ಮತ್ತು ಅದನ್ನು ತುಕ್ಕು ಇರುವ ಜಾಗಕ್ಕೆ ಉಜ್ಜಿಕೊಳ್ಳಿ. 5 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಆ ಸ್ಥಳವನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ. ಹಾಗೇ ಅಡುಗೆ ಸೋಡಾ ಮತ್ತು ಉಪ್ಪನ್ನು ಮಿಕ್ಸ್ ಮಾಡಿ ಪಾತ್ರೆಗಳ ಮೇಲೆ ಹಚ್ಚಿ ಉಜ್ಜಿದರೆ ತುಕ್ಕು ನಿವಾರಣೆಯಾಗುತ್ತದೆ. ಹಾಗೇ ತುಕ್ಕು ಇರುವ ಕಡೆ ಆಲೂಗಡ್ಡೆಯಿಂದ ಉಜ್ಜಿದರೂ ಕೂಡ ತುಕ್ಕು ನಿವಾರಣೆಯಾಗುತ್ತದೆ.

 ನೆಲದ ಮೇಲಿರುವ ತುಕ್ಕುಗಳನ್ನು ನಿವಾರಿಸಲು ತುಕ್ಕು ಹಿಡಿದ ಜಾಗಕ್ಕೆ ಸೀಮೆಎಣ್ಣೆ ಹಾಕಿ, ಸುಮಾರು 10 ನಿಮಿಷ ಬಿಟ್ಟು ಹತ್ತಿ ಬಟ್ಟೆಯಿಂದ ಒರೆಸಿದರೆ ತುಕ್ಕಿನ ಕಲೆ ನಿವಾರಣೆಯಾಗುತ್ತದೆ. ನಂತರ ನೆಲವನ್ನು ನೀರಿನಿಂದ ಸ್ವಚ್ಛಗೊಳಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read