ಹೃದಯ ಸಂಬಂಧಿ ಸಮಸ್ಯೆ ಇದ್ದಾಗ ಕಾಣಿಸಿಕೊಳ್ಳುತ್ತೆ ಈ ಲಕ್ಷಣ

ಹಾರ್ಟ್ ಅಟ್ಯಾಕ್ ನ ಲಕ್ಷಣಗಳನ್ನು ನೀವು ಮೊದಲೇ ಕಂಡುಕೊಳ್ಳಬಹುದು. ಈ ಕೆಳಗಿನ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಎದೆಯ ಭಾಗದಲ್ಲಿ ನೋವು ಕಾಣಿಸಿಕೊಂಡರೆ ಆ ನೋವು ಐದರಿಂದ ಹತ್ತು ನಿಮಿಷ ಕಾಣಿಸಿಕೊಂಡು ಒಂದು ಗಂಟೆ ಬಳಿಕ ಮತ್ತೆ ಪುನರಾವರ್ತನೆಗೊಂಡರೆ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ವಿಪರೀತ ಬೆವರು ಕೂಡಾ ಹೃದಯಾಘಾತದ ಲಕ್ಷಣವಿರಬಹುದು. ವಿನಾಕಾರಣ, ಸೆಖೆ ಇಲ್ಲದೆಯೂ, ಯಾವುದೇ ಕೆಲಸ ಮಾಡದೆಯೂ ವಿಪರೀತ ಬೆವರಿದರೆ ನೀವು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಕೆಲಸ ಮಾಡದೆಯೂ ಸುಸ್ತಾಗುತ್ತಿದ್ದರೆ, ನಡೆದಾಡುವಾಗ ತಲೆ ತಿರುಗಿದ ಅನುಭವವಾದರೆ ತಡ ಮಾಡದೆ ವೈದ್ಯರನ್ನು ಸಂಪರ್ಕಿಸಿ. ಇವೆಲ್ಲವೂ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಲಕ್ಷಣವಿರಬಹುದು. ಇದರ ಪರಿಣಾಮ ನೇರವಾಗಿ ಹೃದಯಾಘಾತವಾಗದಿದ್ದರೂ ಬೇರೆ ರೂಪದಲ್ಲಿ ಅಂದರೆ ಹೃದಯಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳ ಲಕ್ಷಣವಿರಬಹುದು. ಹಾಗಾಗಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read