ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಮುಂಬಯಿ ಪೊಲೀಸ್ ತನ್ನ ಹಾಸ್ಯಪ್ರಜ್ಞೆಯ ಮೂಲಕ ನಾಗರಿಕರಲ್ಲಿ ಕಾನೂನು ಪಾಲನೆಯ ಮಹತ್ವ ತಿಳಿಸುತ್ತಲೇ ಇರುತ್ತದೆ.
ಇದೀಗ ತನ್ನ ಬ್ಯಾಂಡ್ ವೃಂದದಿಂದ ಮೂಡಿ ಬಂದ ’ಬೆಲ್ಲಾ ಸಿಯಾವೂ’ ಗಾಯನದ ಕ್ಯಾಚೀ ಪ್ರದರ್ಶನದ ವಿಡಿಯೋವೊಂದನ್ನು ಮುಂಬಯಿ ಪೊಲೀಸ್ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದೆ.
“ಮುಂಬಯಿಕರ್‌ಗಳೇ ! ನಮ್ಮ ಪೊಲೀಸ್ ಬ್ಯಾಂಡ್ ನಿಮಗಾಗಿ ತರುತ್ತಿರುವ ಈ ಪ್ರದರ್ಶನವನ್ನು ದಯವಿಟ್ಟು ಎಂಜಾಯ್ ಮಾಡಿ” ಎಂದು ಮುಂಬಯಿ ಪೊಲೀಸ್ ಆಯುಕ್ತರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋಗೆ ಟ್ವಿಟರ್‌ನಲ್ಲಿ 58,000 ವೀಕ್ಷಣೆಗಳು ಸಿಕ್ಕಿದ್ದು, ಪೊಲೀಸರ ಈ ಪ್ರತಿಭೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.
https://twitter.com/CPMumbaiPolice/status/1660137779379208195?ref_src=twsrc%5Etfw%7Ctwcamp%5Etweetembed%7Ctwterm%5E1660137779379208195%7Ctwgr%5E492e227ee1ff0b0543bf192cbecacf8323fd2564%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fwatch-this-rendition-of-bella-ciao-by-mumbai-police-band-impresses-internet-4060670