ರಾತ್ರಿ ಸಮಯದಲ್ಲಿ ಹೆಚ್ಚು ಪ್ರೋಟಿನ್‌ ಆಹಾರ ಸೇವಿಸಿದ್ರೆ ಕಾಡುತ್ತೆ ಈ ಸಮಸ್ಯೆ

ಬೊಜ್ಜು, ಮಧುಮೇಹ ಮತ್ತು ಹೃದ್ರೋಗ ಸಮಸ್ಯೆಗೆ ಕಾರಣವಾಗಿದೆ. ಹಾಗೇ ಇದು ಹೆಚ್ಚಾದರೆ ಅನೇಕ ದೀರ್ಘಕಾಲದ ಕಾಯಿಲೆಯಿಂದ ಬಳಲಬೇಕಾಗುತ್ತದೆ. ಜೀವನಶೈಲಿ ಮತ್ತು ವ್ಯಾಯಾಮದ ಕೊರತೆಯೂ ಇದಕ್ಕೆ ಕಾರಣವಾಗಿದೆ.

ಆದರೆ ಇಲ್ಲಿಯವರೆಗೆ ಮಧುಮೇಹ ಸಮಸ್ಯೆಗೆ ಪ್ರೋಟೀನ್ ಸುರಕ್ಷಿತ ಆಹಾರವೆಂದು ಪರಿಗಣಿಸಲಾಗಿತ್ತು. ಆದರೆ ಈಗ ಇದು ನಿಜವಲ್ಲ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಸಂಶೋಧಕರು ಈ ಬಗ್ಗೆ ಜನರ ಮೇಲೆ ಸಂಶೋಧನೆ ನಡೆಸಿದಾಗ ಈ ಸತ್ಯಾಂಶ ತಿಳಿದುಬಂದಿದೆ.

ಹೌದು, ಪ್ರೋಟಿನ್ ನ್ನು ರಾತ್ರಿಯ ವೇಳೆ ಸೇವಿಸಿದರೆ ಮಧುಮೇಹ ಸಮಸ್ಯೆ ಕಾಡುತ್ತದೆಯಂತೆ. ಯಾಕೆಂದರೆ ರಾತ್ರಿಯಲ್ಲಿ ದೇಹಕ್ಕೆ ಹೆಚ್ಚಿನ ಆಹಾರದ ಅಗತ್ಯ ಇರುವುದಿಲ್ಲ. ನಾವು ಸೇವಿಸಿದ ಹೆಚ್ಚುವರಿ ಪ್ರೋಟಿನ್ ಗಳನ್ನು ದೇಹವು ಹೀರಿಕೊಳ್ಳುವುದಿಲ್ಲ. ಆಗ ಪ್ರೋಟಿನ್ ಅಂಶಗಳು ಸಕ್ಕರೆಯಾಗಿ ಪರಿವರ್ತನೆಯಾಗುತ್ತದೆಯಂತೆ. ಇದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಇದರಿಂದ ಮಧುಮೇಹ, ಹೃದಯದ ಅಪಾಯಗಳು ಹೆಚ್ಚಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read