ಬೆಳ್ಳುಳ್ಳಿ ಸೇವನೆಯಿಂದ ದೂರವಾಗುತ್ತೆ ಈ ಸಮಸ್ಯೆ

ದಿನವು ಐದರಿಂದ ಆರು ಬೆಳ್ಳುಳ್ಳಿ ಎಸಳನ್ನು ಬೇಯಿಸಿ ಅದನ್ನು ಊಟದ ಮೊದಲ ತುತ್ತಿನಲ್ಲಿ ತಿನ್ನುತ್ತಿದ್ದರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಬೆಳ್ಳುಳ‍್ಳಿಯಿಂದ ಶರೀರಕ್ಕೆ ಸಾಕಷ್ಟು ಪ್ರಯೋಜನಗಳಿವೆ.

* ಬೆಳ್ಳುಳ್ಳಿಯ ಎಸಳನ್ನು ಅಗೆದು ತಿಂದರೆ ಅಥವಾ ರಸವನ್ನು ಸೇವಿಸಿದರೂ ಮೂತ್ರ ವಿಸರ್ಜನೆಯಲ್ಲಿ ಉರಿ ಕಡಿಮೆ ಆಗುತ್ತದೆ.

* ಜೇನಿನೊಂದಿಗೆ ಸ್ವಲ್ಪ ಪ್ರಮಾಣದ ಬೆಳ್ಳುಳ‍್ಳಿ ರಸವನ್ನು ಬೆರೆಸಿ ಸೇವಿಸಿದರೆ ಕೆಮ್ಮು, ನೆಗಡಿ, ಅಲರ್ಜಿ ಮಾಯವಾಗುತ್ತವೆ.

* ಕೂದಲು ಬೆಳ್ಳಗಾಗಿದ್ದರೆ ಸ್ನಾನಕ್ಕೆ ಮುನ್ನ ಬೆಳ್ಳುಳ್ಳಿ ರಸವನ್ನು ತೆಲೆಗೆ ಲೇಪಿಸಿಕೊಂಡು ಒಣಗಿದ ಬಳಿಕ ಸ್ನಾನ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.

* ದಿನವು ಬಿಸಿ ಹಾಲಿನಲ್ಲಿ ಬೆಳ್ಳುಳ್ಳಿ ರಸವನ್ನು ಬೆರೆಸಿ ಕುಡಿದರೆ ಎದೆ ನೋವು, ಮೂರ್ಚೆ ರೋಗಗಳು ನಿಧಾನವಾಗಿ ಕಡಿಮೆ ಆಗುತ್ತದೆ.

* ಪಾರ್ಶ್ವವಾಯುವಿನಿಂದ ಬಳಲುವವರು ದಿನವು ಬೆಳ್ಳುಳ್ಳಿ ರಸವನ್ನು ಬಳಸಿದರೆ ರಕ್ತ ಪ್ರಸರಣ ಚೆನ್ನಾಗಿ ನಡೆದು ನಿರ್ಜೀವಗೊಂಡ ಭಾಗಗಳು ಪುನಃ ಬಲವನ್ನು ಹೆಚ್ಚಿಸಿಕೊಳ್ಳುತ್ತದೆ. ಹಾಗೂ ಅಂಗೈ ಅಂಗಾಲಿನ ಕೊಬ್ಬು ಕಡಿಮೆಯಾಗುತ್ತದೆ.

* ಒಂದು ಗ್ಲಾಸಿನಲ್ಲಿ ಸ್ವಲ್ಪ ಬಿಸಿ ನೀರನ್ನು ತೆಗೆದುಕೊಂಡು ಅದರಲ್ಲಿ ನಾಲ್ಕು ಹನಿ ಬೆಳ್ಳುಳ‍್ಳಿ ರಸವನ್ನು ಹಾಕಿ ಕೆಮ್ಮು ಇರುವ ಚಿಕ್ಕ ಮಕ್ಕಳಿಗೆ ನೀಡಿದರೆ ಕೆಮ್ಮು ನಿವಾರಣೆ ಆಗುತ್ತದೆ.

* ಶುದ್ಧವಾದ ರಕ್ತ ಪ್ರಸಾರವನ್ನು ಉಂಟು ಮಾಡುತ್ತದೆ. ಅಧಿಕ ಕೊಲೆಸ್ಟ್ರಾಲ್, ಸಕ್ಕರೆ ವ್ಯಾಧಿಯನ್ನು ನಿವಾರಿಸುತ್ತದೆ. ಶರೀರದ ಕೊಬ್ಬು, ಹೊಟ್ಟೆಯ ಉಬ್ಬರವನ್ನು ಇಲ್ಲವಾಗಿಸುತ್ತದೆ. ಚರ್ಮದ ಸಮಸ್ಯೆಯನ್ನು ಪರಿಹರಿಸುತ್ತದೆ.

* ಬೆಳ್ಳುಳ್ಳಿ ಪ್ರತಿ ದಿನ ಬಳಸಿದರೆ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read