ʼಹೈಹೀಲ್ಸ್ʼ ಬಳಸುವವರಿಗೆ ಈ ಸಮಸ್ಯೆ ಕಾಡುತ್ತೆ

ಹೈಹೀಲ್ಡ್ಸ್ ಹಾಕುವುದೆಂದರೆ ಎಲ್ಲರಿಗೂ ಇಷ್ಟವೇ, ಅದರೆ ಹೆಚ್ಚು ಹೊತ್ತು ಹೀಲ್ಸ್ ಹಾಕುವುದರಿಂದ ಬೆನ್ನಿನ ಸಮಸ್ಯೆ ಕಾಡುತ್ತದೆ ಎನ್ನುತ್ತದೆ  ಅಧ್ಯಯನ.

ಬೆನ್ನು, ಕಾಲ್ಬೆರಳು ಮತ್ತು ಕಾಲು ಗಂಟುಗಳ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ವೈದ್ಯರೂ ದೃಢಪಡಿಸಿದ್ದಾರೆ. ನಿತ್ಯ ಹೈ ಹೀಲ್ಸ್ ಧರಿಸುವುದರಿಂದ ನೀವು ನಡೆಯುವ ರೀತಿಯೇ ಬದಲಾಗುತ್ತದೆ. ದೇಹ ತೂಕವನ್ನು ಬ್ಯಾಲೆನ್ಸ್ ಮಾಡಲು ಕಾಲುಗಳು ಒದ್ದಾಡುತ್ತವೆ. ಮೂಳೆಗಳ ವಿನ್ಯಾಸವೂ ಬದಲಾದೀತು.

ಹೀಲ್ಸ್ ಪಾದವನ್ನು ಮೇಲೆ ಕೆಳಗಿನ ಭಂಗಿಯಲ್ಲಿ ಇಟ್ಟುಕೊಳ್ಳುವುದರಿಂದ ಕಾಲ್ಬೆರಳಿಗೆ ಸರಿಯಾಗಿ ರಕ್ತ ಪರಿಚಲನೆ ಸಾಧ್ಯವಾಗುವುದಿಲ್ಲ. ಅಧ್ಯಯನದ ಪ್ರಕಾರ ಶೇ.85ರಷ್ಟು ಮಹಿಳೆಯರಿಗೆ ಹೈ ಹೀಲ್ಸ್ ಧರಿಸುವುದು ಇಷ್ಟವಂತೆ. ಕೆಲಸಕ್ಕೆ ಹೋಗುವ ಮಹಿಳೆಯರು ನಿತ್ಯ ಇದನ್ನು ಬಳಸುತ್ತಾರೆ ಎನ್ನಲಾಗಿದೆ.

ನಿತ್ಯ ಹೈಹೀಲ್ಸ್ ಧರಿಸುವ ಬದಲು ಅಪರೂಪಕ್ಕೊಮ್ಮೆ ಅಂದರೆ ಔಟಿಂಗ್ ಹೋಗುವಾಗ, ಸಮಾರಂಭಗಳಿಗೆ ತೆರಳುವಾಗ ಮಾತ್ರ ಹೀಲ್ಸ್ ಧರಿಸಿ. ಉಳಿದಂತೆ ಸಾದಾ ಚಪ್ಪಲಿ ಬಳಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read