ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಿಸಿ ‘ಸೌಭಾಗ್ಯ’ ತರುತ್ತೆ ಈ ಗಿಡ

 

ಸಸ್ಯಗಳು ವಾತಾವರಣವನ್ನು ಶುದ್ಧಗೊಳಿಸುವ ಕೆಲಸ ಮಾತ್ರ ಮಾಡುವುದಿಲ್ಲ. ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ಕೆಲಸವನ್ನು ಮಾಡುತ್ತವೆ. ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ಸಸಿಗಳ ಬಗ್ಗೆ ಹೇಳಲಾಗಿದೆ. ಅವುಗಳನ್ನು ಮನೆಯಲ್ಲಿ ಬೆಳೆಸುವುದ್ರಿಂದ ಸಾಕಷ್ಟು ಲಾಭವಿದೆ. ಸಕಾರಾತ್ಮಕ ಶಕ್ತಿಯ ವೃದ್ಧಿ ಜೊತೆಗೆ ಮನೆ ಸದಸ್ಯರ ಸುಖ, ಸಮೃದ್ಧಿಗೆ ಅವು ಕಾರಣವಾಗುತ್ತವೆ.

ಮಲ್ಲಿಗೆ: ಮನೆಯಲ್ಲಿ ಮಲ್ಲಿಗೆ ಇದ್ರೆ ಅದ್ರ ಸುಹಾಸನೆ ಮನೆ ತುಂಬ ಹರಡಿರುತ್ತದೆ. ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ. ವಾಸ್ತು ಶಾಸ್ತ್ರದಲ್ಲೂ ಮಲ್ಲಿಗೆ ಪ್ರಾಮುಖ್ಯತೆ ಹೊಂದಿದೆ. ಕುಟುಂಬಸ್ಥರ ಮಧ್ಯೆ ಮನಸ್ತಾಪ, ಗೊಂದಲವಿದ್ರೆ ಮನೆಯಲ್ಲಿ ಮಲ್ಲಿಗೆ ಗಿಡ ಬೆಳೆಸಿ.

ಬಿದಿರು: ಸಣ್ಣ ಬಿದಿರನ್ನು ಮನೆ ಮುಂದೆ ಬೆಳೆಸುವ ಹವ್ಯಾಸ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಫೆಂಗ್ ಶೂಯಿ ಪ್ರಕಾರ ಮನೆಯಲ್ಲಿ ಬಿದಿರು ಇರಬೇಕು. ಇದು ಮನೆಯ ತೊಂದರೆಗಳನ್ನು ನಿವಾರಿಸುವ ಶಕ್ತಿ ಹೊಂದಿದೆ.

ಅಲೋವೇರಾ: ಅಲೋವೆರಾ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಅದೃಷ್ಟವನ್ನು ತರುತ್ತದೆ ಎಂದು ತಜ್ಞರು ಖಚಿತಪಡಿಸಿದ್ದಾರೆ. ಇದನ್ನು ಮನೆಯಲ್ಲಿ  ಇಡುವುದ್ರಿಂದ ಅದೃಷ್ಟ ಬದಲಾಗುತ್ತದೆ. ಕೆಲಸದ ಸಮಸ್ಯೆಯಿರುವವರು ಮನೆಯ ಕೋಣೆಯಲ್ಲಿ ಇದನ್ನು ಬೆಳೆಸಬೇಕು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read