ನಟಿ ಸೋನಾಲಿಯನ್ನು ಕಿಡ್ನಾಪ್ ಮಾಡಲು ಬಯಸಿದ್ದನಂತೆ ಈ ಪಾಕ್‌ ಕ್ರಿಕೆಟಿಗ…!

ಬಾಲಿವುಡ್‌ ನಟಿಯರ ಬಗ್ಗೆ ಪಾಕಿಸ್ತಾನ ಕ್ರಿಕೆಟಿಗರಿಗೆ ವಿಪರೀತ ಒಲವು. ಅದೆಷ್ಟೋ ಕ್ರಿಕೆಟಿಗರು ಬಿ ಟೌನ್‌ನ ಸುಂದರಿಯರನ್ನು ಇಷ್ಟಪಟ್ಟಿದ್ದರು. ಪಾಕಿಸ್ತಾನದ ವೇಗದ ಬೌಲರ್‌ ಆಗಿದ್ದ ಶೋಯೆಬ್‌ ಅಖ್ತರ್‌ ಕೂಡ ಇವರಲ್ಲೊಬ್ಬರು. ಅಖ್ತರ್‌, ನಟಿ ಸೋನಾಲಿ ಬೇಂದ್ರೆ ಮೇಲೆ ಕಣ್ಣು ಹಾಕಿದ್ದರು. ತನ್ನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದರೆ ಸೋನಾಲಿ ಬೇಂದ್ರೆಯನ್ನು ಅಪಹರಿಸುವುದಾಗಿ ಅಖ್ತರ್‌ ಬೆದರಿಕೆ ಕೂಡ ಹಾಕಿದ್ದರು.

ಈ ಕುರಿತಂತೆ ಇತ್ತೀಚೆಗೆ ಸೋನಾಲಿ ಪ್ರತಿಕ್ರಿಯಿಸಿದ್ದಾರೆ. ಅಖ್ತರ್‌ ಬೆದರಿಕೆ ಹಾಕಿದ್ದರು ಎಂಬ ಸುದ್ದಿ ನಕಲಿ ಸಹ ಆಗಿರಬಹುದು, ಅದರ ಸತ್ಯಾಸತ್ಯತೆ ಗೊತ್ತಿಲ್ಲ ಎಂದಿದ್ದಾರೆ. ತನ್ನನ್ನು ಅಖ್ತರ್‌ ಕಿಡ್ನಾಪ್‌ ಮಾಡುವುದಾಗಿ ಹೇಳಿದ್ದರು ಎಂಬ ವಿಚಾರ ಕೇಳಿ ಖುದ್ದು ನಟಿ ಆಶ್ಚರ್ಯಚಕಿತರಾದರು.

ಪಾಕ್‌ ಕ್ರಿಕೆಟಿಗ ತಮ್ಮ ಅಭಿಮಾನಿ ಎಂಬ ವಿಚಾರ ಕೇಳಿ ಖುಷಿಯಾಯ್ತು, ಇದಕ್ಕಾಗಿ ನಾನು ಆಭಾರಿಯಾಗಿದ್ದೇನೆ ಎಂದು ಸೋನಾಲಿ ಬೇಂದ್ರೆ ಹೇಳಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಖ್ತರ್‌, ಒಮ್ಮೆ ಸಂದರ್ಶನವೊಂದರಲ್ಲಿ ಸೋನಾಲಿ ಬೇಂದ್ರೆ ಮೇಲೆ ತಮಗೆ ಮೋಹವಿದೆ ಎಂದು ಒಪ್ಪಿಕೊಂಡಿದ್ದರು. ಅವರನ್ನು ಮದುವೆಯಾಗಲು ಬಯಸುವುದಾಗಿಯೂ ಹೇಳಿದ್ದರು.

ಆದರೆ ಈ ಕುರಿತು ಪ್ರತಿಕ್ರಿಯಿಸಿದ ಅವರು, ಇದೆಲ್ಲ ಸುಳ್ಳು ಸುದ್ದಿ. ನಾನು ಸೋನಾಲಿ ಬೇಂದ್ರೆ ಅವರನ್ನು ಭೇಟಿ ಮಾಡಿಲ್ಲ, ಎಂದಿಗೂ ಅವರ ಅಭಿಮಾನಿಯಾಗಿರಲಿಲ್ಲ. ಅವರನ್ನು ಚಲನಚಿತ್ರಗಳಲ್ಲಿ ನೋಡಿದ್ದೇನೆ ಮತ್ತು ಆಕೆ ಸುಂದರವಾಗಿದ್ದಾರೆ. ಸೋನಾಲಿ ಧೈರ್ಯದಿಂದ ಕ್ಯಾನ್ಸರ್ ವಿರುದ್ಧ ಹೋರಾಡಿದ ನಂತರ ಅವಳನ್ನು ಒಬ್ಬ ವ್ಯಕ್ತಿಯಾಗಿ ಪ್ರಶಂಸಿಸಲು ಪ್ರಾರಂಭಿಸಿದೆ ಎಂದು ಅಖ್ತರ್‌ ಹೇಳಿಕೊಂಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read