ಪತಿ, ಪತ್ನಿ ನಡುವೆ ಸಣ್ಣ ಪುಟ್ಟ ಜಗಳವಾಗಲು ಕಾರಣವಾಗುತ್ತೆ ದಂಪತಿ ಮಾಡುವ ಈ ತಪ್ಪು…..!

ಸುಂದರ ಸಂಸಾರಕ್ಕೆ ಪ್ರೀತಿ ಮುಖ್ಯ. ಪತಿ, ಪತ್ನಿ ಜೀವನ ಪೂರ್ತಿ ಒಟ್ಟಿಗಿರಲು ಬಯಸುತ್ತಾರೆ. ಎಷ್ಟೇ ಪ್ರೀತಿ ಇದ್ದರೂ ಸಣ್ಣ ಪುಟ್ಟ ಗಲಾಟೆಗಳು ಇದ್ದಿದ್ದೆ. ಸಣ್ಣ ಜಗಳ ಪ್ರೀತಿಯನ್ನು ಜಾಸ್ತಿ ಮಾಡುತ್ತೆ ಅಂತಾ ಹಿರಿಯರು ಹೇಳ್ತಾ ಇದ್ದರು. ಆದ್ರೀಗ ಅದೇ ವಿಚ್ಛೇದನಕ್ಕೆ ಕಾರಣವಾಗ್ತಾ ಇದೆ. ಅದೇನೆ ಇರಲಿ, ಪತಿ, ಪತ್ನಿ ನಡುವೆ ಸಣ್ಣ ಪುಟ್ಟ ಜಗಳವಾಗಲು ಕಾರಣವೇನು ಗೊತ್ತಾ?

ಪತ್ನಿಗೆ ಕಿರಿಕಿರಿಯನ್ನುಂಟು ಮಾಡುವ ವಿಷಯ :

ಮದುವೆಗೆ ಮುನ್ನ ಎಲ್ಲವನ್ನೂ ಮಾಡಿಕೊಳ್ತಾ ಇದ್ದ ಪತಿ, ಮದುವೆಯಾದ್ಮೇಲೆ ಪತ್ನಿಯನ್ನೇ ಕೇಳ್ತಾನೆ. ಟವೆಲ್ ನಿಂದ ಹಿಡಿದು ಲ್ಯಾಪ್ ಟಾಪ್ ವರೆಗೆ ಪತ್ನಿಯ ಸಹಾಯ ಬೇಕಾಗುತ್ತದೆ.

ಅಪ್ಪ, ಅಮ್ಮ ಊಟ ಮಾಡಿದ್ರಾ? ಅವರ ಆರೋಗ್ಯ ಹೇಗಿದೆ? ಅವರಿಗೆ ಮಾತ್ರೆ ನೀಡಿದ್ಯಾ? ವೈದ್ಯರು ಏನಂದ್ರು? ಹೀಗೆ ಪ್ರತಿ ದಿನ ಪತಿ, ಪತ್ನಿಗೆ ಕೇಳುವ ಪ್ರಶ್ನೆ ಇದು. ಸದಾ ಅಪ್ಪ-ಅಮ್ಮನ ಬಗ್ಗೆ ಕೇಳುವ ಪತಿಯಿಂದ ಪತ್ನಿಗೆ ಕೋಪ ಬರುವುದು ಸಹಜ.

ಮನೆಗೆ ಬಂದ ತಕ್ಷಣ ಟಿವಿ ಹಚ್ಚುವ ಪತಿ, ರಿಮೋಟ್ ಹಿಡಿದು ಚಾನೆಲ್ ಬದಲಾಯಿಸ್ತಾ ಕುಳಿತುಕೊಳ್ಳುತ್ತಾನೆ.

ಫೋನಿನಲ್ಲಿ ಬ್ಯುಸಿ ಇರುವುದು ಅಥವಾ ಗೇಮ್ ಆಡುತ್ತ ಕಾಲ ಕಳೆಯುವುದು ಪತ್ನಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ.

ವಿಶೇಷ ದಿನಗಳನ್ನು ಮರೆಯುವುದು. ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವವನ್ನು ಮರೆಯುವ ಪತಿ, ಮರೆತಿರಲಿಲ್ಲ, ಸರ್ಪೈಸ್ ನೀಡಬೇಕೆಂದಿದ್ದೆ ಎಂದು ಸುಳ್ಳು ಹೇಳುವುದು.

ಪತಿಗೆ ಕಿರಿಕಿರಿಯನ್ನುಂಟು ಮಾಡುವ ವಿಷಯ:

ಮನೆಗೆ ಸಂಬಂಧಿಕರು ಬಂದಾಗ ಅನಾರೋಗ್ಯದ ನೆಪ ಹೇಳುವುದು. ಹಾಗೆ ಕೆಲಸದಿಂದ ತಪ್ಪಿಸಿಕೊಳ್ಳುವುದು ಪತಿಗೆ ಸಿಟ್ಟು ತರಿಸುತ್ತದೆ.

ಹೊಸ ಹೊಸ ಅಡುಗೆಗಳನ್ನು ಕೆಟ್ಟದಾಗಿ ಮಾಡುವುದಲ್ಲದೆ, ಈ ಬಗ್ಗೆ ಪತಿ ತನ್ನನ್ನು ಹೊಗಳಲಿ ಎಂದು ನಿರೀಕ್ಷಿಸುವುದು.

ಪತ್ನಿಯ ಪತ್ತೇದಾರಿ ಪ್ರಶ್ನೆಗಳು ಪತಿಯ ಕಿರಿಕಿರಿಗೆ ಕಾರಣವಾಗುತ್ತವೆ. ಯಾವಾಗ ?ಎಲ್ಲಿ ?ಹೇಗೆ ?ಯಾರ ಜೊತೆ ? ಹೀಗೆ ಪತ್ನಿ ಕೇಳುವ ಪ್ರಶ್ನೆಗಳಿಗೆ ಮನಸ್ಸಿಲ್ಲದ ಮನಸ್ಸಿನಲ್ಲಿ ಉತ್ತರ ನೀಡುತ್ತಾನೆ ಪತಿ.

ಬೇಡ ಎಂದಾಗ ಕಣ್ಣೀರು ಹಾಕಿ ಅದನ್ನು ಓಕೆ ಎನ್ನಿಸಿಕೊಳ್ಳುವ ಪತ್ನಿಯ ಸ್ವಭಾವ.

ಸಣ್ಣ ವಿಚಾರಕ್ಕೆ ದೊಡ್ಡ ಗಲಾಟೆ ಮಾಡುವುದು. ಒಂದು ಹೇಳಿದ್ರೆ ಇನ್ನೊಂದು ಅರ್ಥ ತಿಳಿದುಕೊಳ್ಳುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read