Viral Video: ಮೈಕಲ್​ ಜಾಕ್ಸನ್ ನೃತ್ಯವನ್ನೇ ಹೋಲುವ ಇಂತಹ ಡಾನ್ಸ್ ನೀವು ನೋಡಿರೋಕೆ ಸಾಧ್ಯವೇ ಇಲ್ಲ…!

ಸೋಶಿಯಲ್​ ಮೀಡಿಯಾ ಮೂಲಕ ಅನೇಕರು ತಮ್ಮ ಪ್ರತಿಭೆಯ ಅನಾವರಣವನ್ನು ಮಾಡುತ್ತಲೇ ಇರ್ತಾರೆ. ಒತ್ತಡದಾಯಕ ಜೀವನದಿಂದ ಮುಕ್ತಿಯನ್ನು ಪಡೆಯುವ ಯತ್ನದಲ್ಲಿ ಅನೇಕರು ಸೋಶಿಯಲ್​ ಮೀಡಿಯಾದಲ್ಲಿ ವಿವಿಧ ವಿಡಿಯೋಗಳನ್ನು ಹುಡುಕುತ್ತಾ ಇರ್ತಾರೆ. ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಫಿಂಗರ್​ ಡ್ಯಾನ್ಸ್​ ವಿಡಿಯೋಗಳು ಟ್ರೆಂಡಿಂಗ್​ನಲ್ಲಿದೆ.

ಕ್ರಿಯೇಟಿವ್​​ಯೆರ್ಟ್ ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಕುತೂಹಲಕಾರಿ ವಿಡಿಯೋವೊಂದು ವೈರಲ್​ ಆಗಿದೆ. ಬೆರಳುಗಳಿಗೆ ಸಣ್ಣ ಬೂಟುಗಳನ್ನು ಹಾಕಿಕೊಂಡ ವ್ಯಕ್ತಿಯು ಬೆರಳಿನಲ್ಲಿಯೇ ಆಕರ್ಷಕ ನೃತ್ಯ ಮಾಡಿ ತೋರಿಸಿದ್ದಾರೆ.

ಬಿಳಿ ಬಣ್ಣದ ಶೂಗಳು, ವಾಚು, ಜಾಕೆಟ್​, ಜೀನ್ಸ್​, ಸನ್​ಗ್ಲಾಸ್​ಗಳ ಮೂಲಕ ಎರಡು ಬೆರಳುಗಳನ್ನು ಥೇಟ್​ ಮೈಕಲ್​ ಜಾಕ್ಸನ್​ರಂತೆ ಅಲಂಕರಿಸಲಾಗಿದೆ.

ವಿಡಿಯೋದ ಉದ್ದಕ್ಕೂ ಈ ಬೆರಳುಗಳನ್ನು ಥೇಟ್​ ಒಬ್ಬ ಮನುಷ್ಯ ನೃತ್ಯ ಮಾಡಿದಂತೆ ಮಾಡಿ ತೋರಿಸಿದ್ದಾರೆ. ಇವರ ಚಲನೆಗಳು ಅತ್ಯಂತ ಪರಿಪೂರ್ಣವಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಾಟ್​ ಕೇಕ್​ನಂತೆ ಸೇಲ್​ ಆಗ್ತಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read