ಸೀಬೆಹಣ್ಣಿನ ಗಿಡದ ಎಲೆಗಳಲ್ಲಿ ಸಾಕಷ್ಟು ಔಷಧಿಯ ಗುಣಗಳಿವೆ. ಅಲ್ಲದೇ ಹಲವು ಪಾಲಿಫಿನಾಲ್, ಕ್ಯಾರೋಟಿನಾಯ್ಡ್, ಫ್ಲೇವನಾಯ್ಡ್ ಗಳೆಂಬ ವಿವಿಧ ಪೋಷಕಾಂಶಗಳಿದ್ದು, ಹಲವು ರೋಗಗಳ ಚಿಕಿತ್ಸೆಗೆ ನೆರವಾಗುತ್ತವೆ. ಇದರ ಇನ್ನಷ್ಟು ಪ್ರಯೋಜನಗಳ ಬಗ್ಗೆ ತಿಳಿಯಿರಿ.
ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣ
ಸೀಬೆ ಎಲೆಗಳನ್ನು ಕುದಿಸಿದ ಟೀ ಮೂರು ತಿಂಗಳವರೆಗೆ ಸತತವಾಗಿ ಕುಡಿಯುವ ಮೂಲಕ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರಾಯ್ಡ್ ಎಂಬ ವಿಷ ವಸ್ತುಗಳನ್ನು ಕಡಿಮೆಗೊಳಿಸಬಹುದು.
ಅತಿಸಾರವನ್ನು ಶಮನಗೊಳಿಸುತ್ತದೆ
ಮಕ್ಕಳಲ್ಲಿ ಹಾಗೂ ಹಿರಿಯರಲ್ಲಿ ಅತಿಸಾರ ಮತ್ತು ಆಮಶಂಕೆಯನ್ನು ನಿವಾರಿಸಲು ಸೀಬೆ ಎಲೆಗಳ ಮಿಶ್ರಣ ಒಂದು ಉತ್ತಮ ಆಯುರ್ವೇದ ಔಷಧಿಯಾಗಿದೆ.
ಜೀರ್ಣಶಕ್ತಿಯನ್ನು ಹೆಚ್ಚಿಸುವುದು
ಸೀಬೆ ಎಲೆಗಳ ಮಿಶ್ರಣದಲ್ಲಿ ಜೀರ್ಣಕ್ರಿಯೆಗೆ ನೆರವಾಗುವ ಹಲವು ಪೋಷಕಾಂಶಗಳಿವೆ. ಸೀಬೆ ಎಲೆಗಳ ಕಷಾಯ ಸೇವಿಸಿದರೆ ಜೀರ್ಣ ಶಕ್ತಿ ಹೆಚ್ಚುತ್ತದೆ.