ʼವಾಸ್ತು ದೋಷʼ ನಿವಾರಿಸುತ್ತೆ ಮನೆಯಲ್ಲಿರುವ ಈ ವಸ್ತು

ವಾಸ್ತು ದೋಷ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಗಲು-ರಾತ್ರಿ ದುಡಿದ್ರೂ ಹಣ ಕೈನಲ್ಲಿ ನಿಲ್ಲೋದಿಲ್ಲ. ನೆಮ್ಮದಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಅನಾರೋಗ್ಯ, ಕಿರಿಕಿರಿ ಸದಾ ಕಾಡುತ್ತಿರುತ್ತದೆ. ಕೆಲವೊಂದು ಸುಲಭ ಉಪಾಯಗಳಿಂದ, ಕಾಡುವ ವಾಸ್ತು ದೋಷವನ್ನು ನಿವಾರಣೆ ಮಾಡಬಹುದು.

ಕೊಳಲು ವಾಸ್ತು ದೋಷ ನಿವಾರಣೆ ಮಾಡುತ್ತದೆ. ಮನೆಯಲ್ಲಿ ಒಂದು ಬೆಳ್ಳಿ ಕೊಳಲು ಇದ್ದಲ್ಲಿ ವಾಸ್ತು ದೋಷ ನಿವಾರಣೆಯಾಗುತ್ತದೆ. ಕೊಳಲನ್ನು ಮನೆಯಲ್ಲಿಡುವುದರಿಂದ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ. ಇದ್ರಿಂದಲೂ ವಾಸ್ತು ದೋಷ ನಿವಾರಣೆಯಾಗುತ್ತದೆ. ಸಂಪತ್ತು ಮನೆ ಪ್ರವೇಶ ಮಾಡುತ್ತದೆ. ಶಿಕ್ಷಣ, ವ್ಯವಹಾರ, ನೌಕರಿ ಸಮಸ್ಯೆ ಎದುರಿಸುವವರು ಮಲಗುವ ಕೋಣೆಯ ಬಾಗಿಲಿನಲ್ಲಿ ಎರಡು ಕೊಳಲನ್ನು ಇಡುವುದು ಶುಭಕರ.

ವಿಘ್ನ ವಿನಾಶಕ ಗಣೇಶ. ಧನ ಹಾಗೂ ಸುಖಕ್ಕಾಗಿ ನೃತ್ಯ ಮಾಡುತ್ತಿರುವ ಗಣೇಶ ಮೂರ್ತಿಯನ್ನು ಮನೆಯಲ್ಲಿಡಬೇಕು.

ಮನೆಯಲ್ಲಿ ಸಾಮಾನ್ಯವಾಗಿ ಲಕ್ಷ್ಮಿ ಮೂರ್ತಿಯನ್ನಿಡುತ್ತಾರೆ. ಆದ್ರೆ ಲಕ್ಷ್ಮಿ ಮೂರ್ತಿ ಜೊತೆಗೆ ಕುಬೇರನ ಮೂರ್ತಿಯನ್ನು ಇಡಬೇಕು. ಉತ್ತರ ದಿಕ್ಕಿನ ಸ್ವಾಮಿಯಾಗಿರುವ ಕುಬೇರನನ್ನು ಮನೆಯ ಉತ್ತರ ದಿಕ್ಕಿನಲ್ಲಿಡಬೇಕು.

ಮನೆಯಲ್ಲಿ ಶಂಖವನ್ನಿಡಬೇಕು. ಇದು ವಾಸ್ತು ದೋಷ ನಿವಾರಣೆ ಜೊತೆಗೆ ನಕಾರಾತ್ಮಕ ಶಕ್ತಿ, ಕೀಟಾಣುಗಳನ್ನು ನಾಶ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read