‘ಧೂಮಪಾನ’ ತ್ಯಜಿಸುವುದರಿಂದ ಇದೆ ಈ ಆರೋಗ್ಯ ಲಾಭ….!

ಧೂಮಪಾನ ಅನ್ನೋದು ತುಂಬಾ ಅಪಾಯಕಾರಿ. ಸಿಗರೇಟ್ ಕ್ಯಾನ್ಸರ್, ಪಾರ್ಶ್ವವಾಯು, ಹೃದಯ ಹಾಗೂ ಶ್ವಾಸಕೋಶದ ಖಾಯಿಲೆಗಳಿಗೆ ಕಾರಣವಾಗುವುದು ಮಾತ್ರವಲ್ಲದೇ ದೇಹದ ಪ್ರತಿಯೊಂದು ಭಾಗಕ್ಕೂ ಇದು ಮಾರಕ. ಗಟ್ಟಿ ಮನಸ್ಸು ಮಾಡಿ ಈ ಚಟದಿಂದ ಮುಕ್ತಿ ಹೊಂದಿದರೆ ಕೆಲವೇ ನಿಮಿಷಗಳಲ್ಲಿ ನೀವು ನಿಮ್ಮ ದೇಹದಲ್ಲಿನ ಬದಲಾವಣೆ ಗುರುತಿಸಬಹುದಾಗಿದೆ.

ನೀವು ಕೊನೇ ಸಿಗರೇಟ್ ಸೇದಿ 20 ನಿಮಿಷದ ನಂತರ ನಿಮ್ಮ ರಕ್ತದೊತ್ತಡ ಹಾಗೂ ಹೃದಯ ಬಡಿತ ಸಾಮಾನ್ಯ ಸ್ಥಿತಿಗೆ ಬರುತ್ತೆ.

8 ಗಂಟೆಗಳ ನಂತರ ರಕ್ತದಲ್ಲಿರುವ ನಿಕೊಟಿನ್ ಹಾಗೂ ಕಾರ್ಬನ್ ಮೊನೊಕ್ಸೈಡ್  ಕಡಿಮೆಯಾಗಿ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತದೆ.

2 ದಿನಗಳ ನಂತರ ಶ್ವಾಸಕೋಶಗಳು ಸ್ವಚ್ಛವಾಗುತ್ತವೆ. ರುಚಿ ಹಾಗೂ ವಾಸನೆ ಗ್ರಹಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ.

3 ದಿನಗಳ ನಂತರ ಉಸಿರಾಟ ಸುಲಭವಾಗುತ್ತದೆ. ಸಶಕ್ತ ಎನ್ನಿಸತೊಡಗುತ್ತದೆ. ಸಿಗರೇಟ್ ಬಿಟ್ಟೊಡನೆ ಕೆಲವರಿಗೆ ಭಾವನೆಗಳ ಏರಿಳಿತ, ಅಸಹನೆ, ತಲೆನೋವು ಕಾಣಿಸಿಕೊಳ್ಳಬಹುದು ಆದರೆ ಇದು ತಾತ್ಕಾಲಿಕ.

2-12 ವಾರಗಳ ನಂತರ ನಿಕೊಟಿನ್ ಇಲ್ಲದೇ ನಿಮ್ಮ ದೇಹ ಹೊಂದಿಕೊಳ್ಳತೊಡಗುತ್ತದೆ.

3 ರಿಂದ 9 ತಿಂಗಳ ನಂತರ ಕೆಮ್ಮು, ಉಬ್ಬಸ, ಉಸಿರಾಟ ಎಲ್ಲವೂ ನಿಯಂತ್ರಣಕ್ಕೆ ಬರುತ್ತವೆ.

1 ವರ್ಷದ ನಂತರ ಸಿಗರೇಟ್ ಸೇದುವವರಿಗಿಂತ ಹೃದಯ ಖಾಯಿಲೆ ಬರುವ ಪ್ರಮಾಣ ಅರ್ಧದಷ್ಟು ಕಡಿಮೆಯಾಗುತ್ತದೆ.

10 ವರ್ಷಗಳ ನಂತರ ಶ್ವಾಸಕೋಶ ಕ್ಯಾನ್ಸರ್ ಬರುವ ಪ್ರಮಾಣ ಅರ್ಧದಷ್ಟು ಇಳಿಕೆಯಾಗುತ್ತದೆ.

15 ವರ್ಷಗಳ ನಂತರ ಹೃದಯಾಘಾತದ ಪ್ರಮಾಣವೂ ಕಡಿಮೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read