ಕೆಲವರು ಟೇಬಲ್ ವ್ಯವಸ್ಥೆ ಇದ್ದರೂ, ಕಾಲು ನೋವು ಇದ್ದರೂ ನೆಲದಲ್ಲೇ ಕೂತು ಊಟ ಮಾಡುವುದನ್ನು ಕಂಡಿರಬಹುದು. ಇದರಿಂದ ದೇಹದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ ಎಂಬುದು ನಿಮಗೆ ಗೊತ್ತೇ?
ಪದ್ಮಾಸನ ಹಾಕಿ ಊಟಕ್ಕೆ ಕೂರುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ನೆಲಕ್ಕೆ ಬಾಗಿ ಊಟ ಮಾಡುವಾಗ ಬೆನ್ನು ಮತ್ತು ಹೊಟ್ಟೆಯ ಸ್ನಾಯುಗಳು ಸಕ್ರಿಯಗೊಂಡು ಜೀರ್ಣಕ್ರಿಯೆಯನ್ನು ಸರಳಗೊಳಿಸುತ್ತವೆ.
ಹೊಟ್ಟೆ ತುಂಬಿದ ಅನುಭವ ನೀಡುವ ಸಂಕೇತಗಳನ್ನು ಮೆದುಳಿಗೆ ರವಾನಿಸುತ್ತದೆ. ಹಾಗಾಗಿ ನೀವು ಬೇಕಿರುವಷ್ಟನ್ನೇ ತಿನ್ನಬಹುದು. ಹೆಚ್ಚುವರಿಯಾಗಿ ಸೇವಿಸಿ ಕೊಬ್ಬು ಬೆಳೆಸಿಕೊಳ್ಳುವ ಸಾಧ್ಯತೆ ಇಲ್ಲಿ ಕಡಿಮೆ.
ಪದ್ಮಾಸನದಲ್ಲಿ ಕುಳಿತುಕೊಳ್ಳುವುದರಿಂದ ಬೆನ್ನಿನ ಹಾಗೂ ಸೊಂಟದ ಭಾಗದ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ. ಗಮನವಿಟ್ಟು ತಿನ್ನಲು ಹಾಗೂ ಮನೆಮಂದಿಯೊಂದಿಗೆ ಸಂತಸದಿಂದ ಸಮಯ ಕಳೆಯಲು ಇದು ಸಹಾಯ ಮಾಡುತ್ತದೆ.

 
			 
		 
		 
		 
		 Loading ...
 Loading ... 
		 
		 
		