ʼಗುಲ್ಕನ್ʼ ಸೇವಿಸುವುದರಿಂದ ಇದೆ ಈ ಪ್ರಯೋಜನ

ಗುಲ್ಕನ್ ಅಥವಾ ರೋಸ್ ಪೆಟಲ್ ಜಾಮ್ ಎನ್ನುವುದು ಒಂದು ಸಿಹಿ ಪದಾರ್ಥ. ಇದರಲ್ಲಿನ ಪೋಷಕಾಂಶಗಳ ಮಹತ್ವವನ್ನು ಗುರುತಿಸಿ ಔಷಧೀಯ ವಸ್ತುವನ್ನಾಗಿ ಬಳಸಲಾಗುತ್ತಿದೆ.

ದೇಹವನ್ನು ತಂಪು ಮಾಡುವ ಗುಣ ಹೊಂದಿರುವ ಗುಲ್ಕನ್, ಮೌತ್ ಫ್ರೆಶನರ್ ಆಗಿ ಕೆಲಸ ಮಾಡುತ್ತದೆ. ಸುಸ್ತು, ಅಲಸ್ಯ, ತುರಿಕೆ, ನೋವನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿದೆ.

ಅಲ್ಲದೆ ಅಂಗೈ ಮತ್ತು ಅಂಗಾಲುಗಳಲ್ಲಿ ಸೆಕೆ, ಉರಿ ಆಗುತ್ತಿದ್ದಲ್ಲಿ ಅದನ್ನು ನಿಯಂತ್ರಿಸಲು ಸಹಕಾರಿ. ಆಂಟಿ ಆಕ್ಸಿಡೆಂಟ್ ಗಳಿಂದ ತುಂಬಿರುವಂತಹ ಇದು ದೇಹದ ಕೋಶಗಳು ಪುನರ್ ಉತ್ಪತ್ತಿಯಾಗಲು ನೆರವಾಗುತ್ತದೆ.

ಒಂದರಿಂದ 2 ಚಮಚ ಗುಲ್ಕನ್ ಸೇವಿಸುವುದರಿಂದ ವೇಗವಾಗಿ ಹೈಪರ್ ಅಸಿಡಿಟಿ ಹಾಗೂ ಹೊಟ್ಟೆ ಉರಿ ಕಡಿಮೆ ಮಾಡಬಹುದು. ಹಾಗೆ ಅಲ್ಸರ್ ಹಾಗೂ ಕರುಳಿನಲ್ಲಿ ಬಾವು ಇದ್ದರೆ ಅದನ್ನು ಕಡಿಮೆ ಮಾಡುತ್ತದೆ.

ಬಾಯಿ ಹುಣ್ಣು ಕಡಿಮೆ ಮಾಡಲು, ಹಲ್ಲಿನ ಬಲವನ್ನು ಹೆಚ್ಚಿಸಲು, ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವನ್ನು ಕಡಿಮೆ ಮಾಡಲು, ಜೀರ್ಣಶಕ್ತಿಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

ದೇಹದಿಂದ ವಿಷ ವಸ್ತುಗಳನ್ನು ಹೊರ ಹಾಕಿ ಶುದ್ದಿ ಮಾಡುವ ಕಾರ್ಯವನ್ನು ಗುಲ್ಕನ್ ಮಾಡುತ್ತದೆ. ಅಷ್ಟೇ ಅಲ್ಲದೆ ಚರ್ಮದ ಆರೋಗ್ಯಕ್ಕೂ ಉತ್ತಮ.
ಇಷ್ಟೆಲ್ಲಾ ಉಪಯೋಗ ಹೊಂದಿರುವ ಗುಲ್ಕನ್ ತಯಾರಿಯಲ್ಲಿ ಸಕ್ಕರೆಯನ್ನು ಬಳಸಲಾಗುತ್ತದೆ. ಆದ್ದರಿಂದ ತೊಳೆದ ಗುಲಾಬಿಗಳನ್ನು ನೆರಳಿನಲ್ಲಿ ಒಣಗಿಸಿ ಜೇನುತುಪ್ಪವನ್ನು ಉಪಯೋಗಿಸಿ ಮನೆಯಲ್ಲಿಯೇ ಗುಲ್ಕನ್ ತಯಾರಿಸಿ ಬಳಸುವುದು ಉತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read