52 ವರ್ಷದ ಅಜ್ಜಿ ತನ್ನ ಮಗಳಿಗಾಗಿ ಮೊಮ್ಮಗುವಿಗೆ ಜನ್ಮ ನೀಡಿರೋದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಕ್ರಿಸ್ಟಿ ಶ್ಮಿಡ್ ಎಂಬಾಕೆ ತನ್ನ ಮಗಳ ಕನಸನ್ನ ನನಸು ಮಾಡಲು ಇಂತಹ ಸಾಹಸ ಮಾಡಿದ್ದಾರೆ.
ಕ್ರಿಸ್ಟಿ ಮತ್ತು ಆಕೆಯ ಮಗಳು ಹೈಡಿ ಯಾವಾಗಲೂ ಕ್ಲೋಸ್ ಫ್ರೆಂಡ್ಸ್ ತರಾನೇ ಇದ್ರು. ಹೈಡಿ ಚಿಕ್ಕವಳಿದ್ದಾಗಿನಿಂದ ತಾಯಿಯಾಗುವ ಕನಸು ಕಂಡಿದ್ಲು. ಆದ್ರೆ, 2015 ರಲ್ಲಿ ಆಕೆ ಮದುವೆಯಾಗಿ ಫ್ಯಾಮಿಲಿ ಶುರು ಮಾಡೋಕೆ ಟ್ರೈ ಮಾಡಿದ್ರೂ, ಅದು ಕಷ್ಟ ಆಯ್ತು. ಎಷ್ಟೇ ಪ್ರಯತ್ನ ಪಟ್ಟರೂ ಹೈಡಿ ಗರ್ಭ ಧರಿಸೋಕೆ ಆಗಲಿಲ್ಲ.
2020 ರಲ್ಲಿ, ಹೈಡಿ ಗರ್ಭಿಣಿ ಆದ್ಲು. ಆದ್ರೆ, ಅವಳ ಸಂತೋಷ ಹೆಚ್ಚು ದಿನ ಇರ್ಲಿಲ್ಲ. ಹೈಡಿಗೆ ಎರಡು ಗರ್ಭಾಶಯಗಳು ಇರೋದು ಮತ್ತು ಅವಳಿ ಮಕ್ಕಳಿಗೆ ಗರ್ಭಿಣಿಯಾಗಿರೋದು ಗೊತ್ತಾಯ್ತು. ದುರಾದೃಷ್ಟವಶಾತ್, 10 ವಾರಗಳಲ್ಲಿ ಒಂದು ಮಗುವಿನ ಹೃದಯ ಬಡಿತ ನಿಂತುಹೋಯ್ತು ಮತ್ತು 24 ವಾರಗಳಲ್ಲಿ ಮತ್ತೊಂದು ಮಗುವನ್ನು ಕಳೆದುಕೊಂಡ್ರು.
ಹೈಡಿ ಮತ್ತೆ ಗರ್ಭ ಧರಿಸಬಹುದಾದ್ರೂ, ಅದು ತುಂಬಾ ಅಪಾಯಕಾರಿ ಅಂತ ಡಾಕ್ಟರ್ಸ್ ಹೇಳಿದ್ರು. ಮಗಳ ನೋವು ನೋಡಿದ ಕ್ರಿಸ್ಟಿಗೆ ಏನು ಮಾಡೋದು ಅಂತ ಗೊತ್ತಾಗಲಿಲ್ಲ. ಹೈಡಿ ಐವಿಎಫ್ (ಇನ್ ವಿಟ್ರೊ ಫಲೀಕರಣ) ಮತ್ತು ಬಾಡಿಗೆ ತಾಯ್ತನದ ಬಗ್ಗೆ ಯೋಚಿಸ್ತಿದ್ದಾಳೆ ಅಂತ ಹೇಳಿದ್ಲು. ಇದನ್ನ ಕೇಳಿದ ಕ್ರಿಸ್ಟಿ ತಕ್ಷಣವೇ ಹೈಡಿಯ ಬಾಡಿಗೆ ತಾಯಿಯಾಗಲು ಮುಂದಾದ್ರು.
ಹೈಡಿ ಶಾಕ್ ಆದ್ಲು, ಆದ್ರೆ ಕ್ರಿಸ್ಟಿ ತಾನು ಆರೋಗ್ಯವಾಗಿದ್ದೀನಿ ಅಂತ ಭರವಸೆ ನೀಡಿದ್ಲು. ಕ್ರಿಸ್ಟಿಯ ಗಂಡ ಕೂಡ ಈ ಪ್ಲಾನ್‌ಗೆ ಸಪೋರ್ಟ್ ಮಾಡಿದ್ರು. ಎಲ್ಲಾ ಮೆಡಿಕಲ್ ಟೆಸ್ಟ್ ಪಾಸ್ ಆದ್ಮೇಲೆ, ಕ್ರಿಸ್ಟಿಗೆ ಗ್ರೀನ್ ಸಿಗ್ನಲ್ ಸಿಕ್ತು. ಗರ್ಭಧಾರಣೆಗೆ ತನ್ನ ದೇಹವನ್ನು ಸಿದ್ಧಪಡಿಸಲು ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡ್ರು. ಭ್ರೂಣ ವರ್ಗಾವಣೆ ಆದ್ಮೇಲೆ, ಒಂಬತ್ತು ತಿಂಗಳಲ್ಲಿ ಮಗುವನ್ನು ನಿನ್ನ ಕೈಗೆ ಕೊಡ್ತೀನಿ ಅಂತ ಹೈಡಿಗೆ ಪ್ರಾಮಿಸ್ ಮಾಡಿದ್ರು. ಒಂಬತ್ತು ದಿನಗಳ ನಂತರ, ಗರ್ಭಧಾರಣೆಯ ಪರೀಕ್ಷೆ ಪಾಸಿಟಿವ್ ಬಂತು.
ಕ್ರಿಸ್ಟಿಯ ಗರ್ಭಧಾರಣೆ ಯಾವುದೇ ಪ್ರಾಬ್ಲಮ್ ಇಲ್ಲದೆ ಮುಂದುವರೆಯಿತು. ಕೆಲವರು ಅವಳ ನಿರ್ಧಾರವನ್ನು ಟೀಕಿಸಿದ್ರು, ಆದ್ರೆ ಕ್ರಿಸ್ಟಿ ಅದನ್ನ ತಲೆಕೆಡಿಸಿಕೊಳ್ಳಲಿಲ್ಲ. ಕ್ರಿಸ್ಟಿಯ ಗಂಡ ರೇ “ಇದು ನನ್ನ ಮಗುವಲ್ಲ, ನಮ್ಮ ಅಳಿಯನ ಮಗು ಮತ್ತು ನನ್ನ ಮೊಮ್ಮಗ !” ಅಂತ ಜೋಕ್ ಮಾಡ್ತಿದ್ರು. ಮಾರ್ಚ್ 2022 ರಲ್ಲಿ, ಬೇಬಿ ಎಕ್ಕೊ ಜಾಯ್ ಸಿಸೇರಿಯನ್ ಮೂಲಕ ಹುಟ್ಟಿದ್ಲು. “ಎಕ್ಕೊವನ್ನು ನನ್ನ ಕೈಯಲ್ಲಿ ಹಿಡಿದಾಗ, ನಾನು ಜೀವಂತವಾಗಿ ಬಂದಂತೆ ಭಾಸವಾಯಿತು. ಅವಳು ಇಲ್ಲಿದ್ದಾಳೆ, ಅದಕ್ಕೆಲ್ಲ ನನ್ನ ತಾಯಿಗೆ ಧನ್ಯವಾದಗಳು” ಅಂತ ಹೈಡಿ ಹೇಳಿದ್ಲು.
ಇವತ್ತು, ಎಕ್ಕೊ ಸಂತೋಷದಿಂದ ಮೂರು ವರ್ಷದ ಮಗು, ಅವಳು ಕ್ರಿಸ್ಟಿಯೊಂದಿಗೆ ಆಳವಾದ ಬಾಂಧವ್ಯವನ್ನು ಹೊಂದಿದ್ದಾಳೆ. “ನನಗೆ ಯಾವುದೇ ಧನ್ಯವಾದಗಳು ಬೇಡ” ಅಂತ ಕ್ರಿಸ್ಟಿ ಹೇಳಿದ್ರು. “ಹೈಡಿಯ ಸಂತೋಷಕ್ಕಾಗಿ ಇದನ್ನೆಲ್ಲ ಮಾಡಲು ನನಗೆ ಚಾನ್ಸ್ ಸಿಕ್ಕಿತು.” ಎಂದಿದ್ದಾರೆ.