ನೈಸರ್ಗಿಕ‌ವಾಗಿ ತೂಕ ಏರಿಕೆಯಾಗ್ಬೇಕೆಂದ್ರೆ ನಿಮ್ಮ ಡಯಟ್ ಹೀಗಿರಲಿ

ಬೊಜ್ಜು ಪ್ರತಿಯೊಬ್ಬರನ್ನು ಕಾಡುವ ಸಮಸ್ಯೆ. ಇತ್ತೀಚಿನ ದಿನಗಳಲ್ಲಿ ಜನರು ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಆದ್ರೆ ಏರಿದ ತೂಕ ಇಳಿಸುವುದು ಸುಲಭದ ಮಾತಲ್ಲ. ಇನ್ನು ಕೆಲವರಿಗೆ ತೂಕ ಇಳಿಕೆ ಸಮಸ್ಯೆ ಇರುತ್ತದೆ. ಎಷ್ಟು ಆಹಾರ ಸೇವನೆ ಮಾಡಿದ್ರೂ ತೂಕ ಏರುವುದಿಲ್ಲ. ಅಂತವರು ಈ ಪ್ಲಾನ್ ಪಾಲಿಸಬಹುದು.

ತೂಕ ಏರಿಕೆಗೆ ಬಳಸುವ ಕೃತಕ ಪ್ರೋಟೀನ್ ಪೂರಕಗಳು ನಮ್ಮ ಯಕೃತ್ತು, ಮೂತ್ರಪಿಂಡ ಮತ್ತು ದೇಹದ ಅನೇಕ ಭಾಗಗಳಿಗೆ ಹಾನಿಯುಂಟು ಮಾಡುತ್ತವೆ. ನೈಸರ್ಗಿಕ ವಸ್ತುಗಳ ಸಹಾಯದಿಂದ ಸುಲಭವಾಗಿ ತೂಕ ಏರಿಸಬಹುದು.

ಚನಾ ಜೊತೆ ಖರ್ಜೂರ : ಇದು ದೇಸಿ ಮತ್ತು ಅತ್ಯಂತ ಪ್ರಯೋಜನಕಾರಿ ಆರೋಗ್ಯಕರ ಆಹಾರವಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ, ಆರೋಗ್ಯ ವೃದ್ಧಿಯಾಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚನಾ ಹಾಗೂ  ಖರ್ಜೂರವನ್ನು ಸೇವನೆ ಮಾಡುತ್ತ ಬಂದಲ್ಲಿ, ಕೆಲವೇ ದಿನಗಳಲ್ಲಿ ಪರಿಣಾಮ ಕಾಣಿಸುತ್ತದೆ.

ಮೊಟ್ಟೆ : ಮೊಟ್ಟೆಯಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ಕ್ಯಾಲೋರಿಗಳಿವೆ. 2 ಮೊಟ್ಟೆಯನ್ನು ಬೇಯಿಸಿ ತಿನ್ನುವುದ್ರಿಂದ ತೂಕ ಹೆಚ್ಚಳಕ್ಕೆ ನೆರವಾಗುತ್ತದೆ.

ಹಾಲು ಮತ್ತು ಬಾಳೆಹಣ್ಣು : ಬಾಳೆಹಣ್ಣಿನಲ್ಲಿ ಕ್ಯಾಲೋರಿಗಳು ಹೇರಳವಾಗಿದೆ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹಾಲಿನೊಂದಿಗೆ ಬಾಳೆ ಹಣ್ಣು ಸೇವಿಸಿದಾಗ, ಇದು ಪ್ರೋಟೀನ್ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.

ಒಣದ್ರಾಕ್ಷಿ : ಪ್ರತಿದಿನ ಸ್ವಲ್ಪ ಒಣದ್ರಾಕ್ಷಿ ತಿಂದರೆ ತೂಕ ಸ್ವಲ್ಪ ಹೆಚ್ಚಾಗಬಹುದು. ಒಣದ್ರಾಕ್ಷಿ ಮತ್ತು ಅಂಜೂರದ ಹಣ್ಣುಗಳನ್ನು ರಾತ್ರಿಯಿಡೀ ನೆನೆಸಿ ಮತ್ತು ಬೆಳಿಗ್ಗೆ ತಿಂದಲ್ಲಿ ತೂಕ ಬೇಗ ಹೆಚ್ಚಾಗುತ್ತದೆ.

ಹಾಲು-ಬಾದಾಮಿ : ರಾತ್ರಿ 3 ರಿಂದ 4 ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ಮರುದಿನ ಬಾದಾಮಿಯನ್ನು ಪುಡಿ ಮಾಡಿ ಒಂದು ಲೋಟ ಹಾಲಿನಲ್ಲಿ ಬೆರೆಸಿ ಕುಡಿಯಿರಿ. ಕೆಲವೇ ದಿನಗಳಲ್ಲಿ ಪರಿಣಾಮ ಕಾಣಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read